ಆಲಂಕಾರು: ಕಡಬ ತಾಲೂಕಿನ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಮಾಹಿತಿ ಕಾರ್ಯಗಾರ ರಾಮಕುಂಜ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.
ಕಡಬ ತಾಲೂಕು ಉಪ ತಹಶೀಲ್ದಾರರಾದ ಗೋಪಾಲ.ಕೆ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಸಮಸ್ಯೆಗಳನ್ನು ಆಲಿಸಿ ಕಂದಾಯ ಇಲಾಖೆಯ ಬಗ್ಗೆ ಮಾಹಿತಿ ನೀಡಿ ಸರಕಾರದ ಸವಲತ್ತುಗಳನ್ನು ಗ್ರಾಮಮಟ್ಟದಲ್ಲಿ ಭ್ರಷ್ಟಾಚಾರ ರಹಿತವಾಗಿ ತಲುಪಿಸುವ ಉದ್ದೇಶದಿಂದ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳನ್ನು ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸರಕಾರ ಅನುಷ್ಠಾನ ಗೊಳಿಸಿದ್ದು .ಗ್ರಾಮ ಒನ್ ಸೇವಾ ಕೇಂದ್ರದಲ್ಲಿ ಸಲ್ಲಿಸಿದ ಕಂದಾಯ ಇಲಾಖೆಯ ಅರ್ಜಿಗಳು ಗ್ರಾಮ ಅಡಳಿತಾಧಿಕಾರಿ,ಗ್ರಾಮ ಸಹಾಯಕರ ಕಂದಾಯ ಇಲಾಖೆಗೆ ತಲುಪಬೇಕು.ಕಂದಾಯ ಇಲಾಖೆಯವರು ಸರಿಯಾಗಿ ಸ್ಪಂದನೆ ನೀಡದಿದ್ದರೆ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದವರು ನೇರ ಸಂಪರ್ಕಿಸುವಂತೆ ತಿಳಿಸಿದರು.
ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಜಿಲ್ಲಾ ಸಂಯೋಜಕರಾದ ಪ್ರಜ್ವಲ್ ರವರು ಕಡಬ ತಾಲೂಕಿನ ಪ್ರತಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಸಮಸ್ಯೆ ಆಲಿಸಿ ಹಾಗು ಇನ್ನು ಮುಂದೆ ನೀಡಬೇಕಾದ ಸೇವೆಗಳನ್ನು ವಿವರಗಳನ್ನು ತಿಳಿಸಿದರು.
ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಐ.ಡಿಗಳನ್ನು ಷೇರ್ ಮಾಡದಂತೆ ತಿಳಿಸಿ ,ಐ.ಡಿ ಷೇರ್ ಮಾಡಿದರೆ ಗ್ರಾಮ ಒನ್ ಐ.ಡಿಯು ರದ್ದತಿ ಗೊಳ್ಳುತ್ತದೆ ಎಂದು ತಿಳಿಸಿ, ಸೇವಾ ಸಿಂಧುವಿನ ಸೇವೆ, ಬಿ.ಎಲ್.ಎಸ್ ಸೇವೆ, ನಾನ್ ಸೇವಾ ಸಿಂಧುಗಳ ಸೇವೆಯ ಬಗ್ಗೆ ಮಾಹಿತಿ ನೀಡಿ ಗ್ರಾಮ ಒನ್ ಸೇವಾ ಕೇಂದ್ರದ ಮೂಲಕ ಜನರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವಂತೆ ತಿಳಿಸಿದರು.
ಸೇಲ್ಕೋ ಸೋಲಾರ್ ಸಿಸ್ಟಮ್ ನವರು ಕೇಂದ್ರ ಸರಕಾರದ ಸೂರ್ಯ ಘರ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು
ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಹಾಗು ಗ್ರಾಮ ಒನ್ ಸೇವಾ ಕೇಂದ್ರಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಡಬ ತಾಲೂಕು ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಅಧ್ಯಕ್ಷ ಸದಾಶಿವ ಶೆಟ್ಟಿ ಮಾರಂಗ ಮಾತನಾಡಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದ ಮೂಲಕ ಸರಕಾರದ ಯೋಜನೆಗಳಾದ ಗೃಹಲಕ್ಷ್ಮಿ,ಗೃಹಜ್ಯೋತಿ ಹಾಗು ಇನ್ನಿತರ ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಮೂಲಕ ಸಮರ್ಪಕವಾಗಿ ತಲುಪಿಸಲು ಗ್ರಾಮ ಒನ್ ಸೇವಾ ಕೇಂದ್ರಗಳು ಸಹಕಾರಿಯಾಗಿದೆ.ಜನಪರ ಯೋಜನೆಗಳನ್ನು ಜಾರಿಗೆ ತಂದ ಸರಕಾರಕ್ಕೆ ,ಜನಪರ ಯೋಜನೆಗಳನ್ನು ತಲುಪಿಸಲು ಎಲ್ಲಾ ರೀತಿಯಲ್ಲಿ ಸಹಕರಿಸಿದ ಎಲ್ಲಾ ಅಧಿಕಾರಿ ವೃಂದದವರಿಗೆ ಹಾಗು ಜನರಿಗೆ ಅಭಿನಂದನೆ ಸಲ್ಲಿಸಿ, ಮಾಹಿತಿ ಕಾರ್ಯಗಾರದಲ್ಲಿ ಪಾಲ್ಗೊಂಡ ಕಡಬ ತಾಲೂಕಿನ ಎಲ್ಲಾ ಗ್ರಾಮ ಒನ್ ಸೆಂಟರ್ ನವರಿಗೆ ಹಾಗು ಮನಮುಟ್ಟುವ ರೀತಿಯಲ್ಲಿ ಮಾಹಿತಿಯನ್ನು ನೀಡಿದ ಇಲಾಖಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಸಂಯೋಜಕ ವಿನೋದ್ ಬಲ್ಪ ಮಾತನಾಡಿ ನಾವು ಸಂಘಟನಾತ್ಮಕ ದೃಷ್ಟಿಯಿಂದ ಕಡಬ ತಾಲೂಕಿನ ಎಲ್ಲಾ ಗ್ರಾಮ ಒನ್ ನಾಗರಿಕ ಸೇವಾಕೇಂದ್ರದಲ್ಲಿ ಏಕಮುಖವಾದ ಒಂದೇ ತರದ ಸೇವೆಗಳು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಸಹಕರಿಸಿದವರಿಗೆಲ್ಲಾ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಒನ್ ನಾಗರಿಕ ಸೇವಾಕೇಂದ್ರದ ಜಿಲ್ಲಾ ಸಂಯೋಜಕಿಯಾಗಿ ಸ್ವಯಂ ನಿವೃತ್ತಿಗೊಂಡ ಅಕ್ಷತಾ ರವರನ್ನು ಸಭೆಯಲ್ಲಿ ಕಡಬ ತಾಲೂಕು ಗ್ರಾಮ ಒನ್ ಸೇವಾ ಕೇಂದ್ರಗಳ ಸಂಘದ ವತಿಯಿಂದ ಗೌರವಿಸಲಾಯಿತು. ಸಂಘದ ಕಾರ್ಯದರ್ಶಿ ನೂಜಿಬಾಳ್ತಿಲ ಗ್ರಾಮ ಒನ್ ಸೇವಾ ಕೇಂದ್ರದ ಪದ್ಮನಾಭ ರವರು ಸ್ವಾಗತಿಸಿ, ಕೋಶಾಧಿಕಾರಿ ರಾಮಕುಂಜ ಗ್ರಾಮ ಒನ್ ಸೇವಾ ಕೇಂದ್ರದ ಪ್ರವೀಣ್ ದೇರೆಜಾಲು ಧನ್ಯವಾದ ಸಮರ್ಪಿಸಿದರು.
ಕಡಬ ತಾಲೂಕು ಗ್ರಾಮ ಒನ್ ಸೇವಾಕೇಂದ್ರಗಳಾದ ಬೆಳಂದೂರಿನ ಚಂದ್ರಶೇಖರ, ಸುಬ್ರಹ್ಮಣ್ಯ ದ ಲೋಲಾಕ್ಷಿ ಕೆದ್ಲಾಯ,ಕೊಂಬಾರಿನ ಮಮತಾ,ಐತ್ತೂರಿನ ಪ್ರಜ್ಞಾ,ಸುಬ್ರಹ್ಮಣ್ಯ ದ ಪವಿತ್ರ, ಸವಣೂರಿನ ರಶ್ಮಿ.ಕೆ,ಕೌಕ್ರಡಿಯ ಗುಣಶೀಲಾ,ಗೋಳಿತ್ತೋಟ್ಟಿನ ಲಾವಣ್ಯ, ಕಾಣಿಯೂರಿನ ನಮಿತಾ, ಕೌಕ್ರಡಿಯ ಅಕ್ಷತಾ, ಮರ್ದಾಳದ ಲೋಲಾಕ್ಷ, ಬಿಳಿನೆಲೆಯ ದೀಕ್ಷಿತ್ ಕುಮಾರ್, ಸೇರಿದಂತೆ ಎಲ್ಲಾ ಕಡಬ ತಾಲೂಕಿನ ಎಲ್ಲಾ ಗ್ರಾಮ ಒನ್ ಸೇವಾ ಕೇಂದ್ರದವರು ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.