ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದಲ್ಲಿ ತರಬೇತಿ ಕಾರ್ಯಕ್ರಮ- 2025ರ ಕ್ಯಾಲೆಂಡರ್ ಬಿಡುಗಡೆ

0

ಪುತ್ತೂರು: ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಪುತ್ತೂರು ಎಸ್‌ಎಮ್‌ಟಿ ಸಹಿತ ಎಪಿಎಂಸಿ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು, ಕಾಣಿಯೂರು, ಬೆಳ್ಳಾರೆ, ವಿಟ್ಲದಲ್ಲಿ ಶಾಖೆಗಳನ್ನು ಹೊಂದಿಕೊಂಡಿರುವ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದಿಂದ ಸಿಬ್ಬಂದಿಗಳಿಗೆ ಒಂದು ದಿನ ತರಬೇತಿ ಮತ್ತು 2025ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನ.24ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿರುವ ಹವಾನಿಯಂತ್ರಿತ ಚುಂಚಶ್ರೀ ಸಭಾಭವನದಲ್ಲಿ ನಡೆಯಿತು.


ಸಹಕಾರ ಸಂಘಗಳ ತರಬೇತಿದಾರರಾದ ಶ್ರೀಶ ಕೆ.ಎಂ ಮಂಗಳೂರು ಮತ್ತು ಹೆಬ್ಬಾರ್ ಮಂಗಳೂರು ಅವರು ತರಬೇತಿ ಕಾರ್ಯಕ್ರಮ ನಡೆಸಿದರು. ಸಂಘದ ಮುಖ್ಯ ಪ್ರವರ್ತಕ ಮೋಹನ್ ಗೌಡ ಇಡ್ಯಡ್ಕ ಅವರು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಸಂಸ್ಥೆಯ 2025ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಚಿದಾನಂದ ಬೈಲಾಡಿ, ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಶುಭ ಹಾರೈಸಿದರು. ಸಂಘದ ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ, ಜಿನ್ನಪ್ಪ ಗೌಡ ಮಳುವೇಲು, ಲೋಕೇಶ್ ಚಾಕೋಟೆ, ಸತೀಶ್ ಪಾಂಬಾರು, ಸುಪ್ರೀತಾ ರವಿಚಂದ್ರ ಉಪಸ್ಥಿತರಿದ್ದರು. ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ ಗೌಡ ಕಣಜಾಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ, ಶಾಖಾ ವ್ಯವಸ್ಥಾಪಕರಾದ ಶಿವಪ್ರಸಾದ್ ಕೆ, ದಿನೇಶ್, ರೇವತಿ ಯಚ್, ತೇಜಸ್ವಿನಿ, ವಿನೋದ್‌ರಾಜ್, ಹರೀಶ್, ನಿಶ್ಚಿತಾ ಯು.ಡಿ, ಕಾರ್ತಿಕ್, ಪ್ರೀತಮ್ ಎಮ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here