ಉಪ್ಪಿನಂಗಡಿ: ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮುಂಬರುವ ಡಿ.18ರಿಂದ ಡಿ.23ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ದೇವಾಲಯದಲ್ಲಿ ನ.26ರಂದು ಚಪ್ಪರ ಮುಹೂರ್ತ ನೆರವೇರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಕೇಶವರಾಜ ಭಟ್ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು.
ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷರಾದ ನಡುಸಾರು ಉದಯಶಂಕರ ಭಟ್ಟ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಜಗದೀಶ ರಾವ್ ಮಣಿಕ್ಕಳ ಚಪ್ಪರ ಮುಹೂರ್ತ ನೆರವೇರಿಸಿದರು. ಈ ಸಂದರ್ಭ ದೇವಾಲಯದ ಆಡಳಿತ ಸಮಿತಿಯ ಉಪಾಧ್ಯಕ್ಷರಾದ ಸುರೇಶ್ ಅತ್ರೆಮಜಲು, ಕಾರ್ಯದರ್ಶಿ ಕೇಶವ ಗೌಡ ರಂಗಾಜೆ, ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ ನೆಡ್ಚಿಲು, ಸದಸ್ಯರಾದ ಶಾಂಭವಿ ರೈ ಪುಳಿತ್ತಡಿ, ಹರೀಶ್ವರ ಮೊಗ್ರಾಲ್, ಶಂಕರನಾರಾಯಣ ಭಟ್ ಬೊಳ್ಳಾವು, ಸದಾನಂದ ಶೆಟ್ಟಿ ಕಿಂಡೋವು, ಜತ್ತಪ್ಪ ನಾಯ್ಕ ಬೊಳ್ಳಾವು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಜಯಗೋವಿಂದ ಶರ್ಮಾ ಪದಾಳ, ಜೊತೆ ಕಾರ್ಯದರ್ಶಿ ಸುರೇಶ್ ಗೌಂಡತ್ತಿಗೆ, ವಿವಿಧ ಸಮಿತಿಗಳ ಗಿರೀಶ್ ಆರ್ತಿಲ, ಸುನೀಲ್ ಕುಮಾರ್ ದಡ್ಡು, ವಸಂತ ನಾಯ್ಕ ಬೊಳ್ಳಾವು, ಧರ್ನಪ್ಪ ನಾಯ್ಕ ಬೊಳ್ಳಾವು, ಪ್ರಶಾಂತ್ ಪೆರಿಯಡ್ಕ, ಕಂಗ್ವೆ ವಿಶ್ವನಾಥ ಶೆಟ್ಟಿ, ವಸಂತ ಕುಕ್ಕುಜೆ, ವೀರಪ್ಪ ಗೌಡ ಪುಳಿತ್ತಡಿ, ರಾಧಾಕೃಷ್ಣ ಭಟ್ ಬೊಳ್ಳಾವು, ಮಹಾಲಿಂಗೇಶ್ವರ ಭಟ್ ಮಧುವನ, ರಘು ಪೂಜಾರಿ, ಜಯಂತ ಪೊರೋಳಿ, ರಾಮಚಂದ್ರ ಭಟ್ ಕಲ್ಲಾಜೆ, ವೆಂಕಟ್ರಮಣ ಭಟ್ ಮುಂಚಿಕ್ಕಾನ ಮತ್ತಿತರರು ಉಪಸ್ಥಿತರಿದ್ದರು.