ಸೈಂಟ್ ಮಿಲಾಗ್ರಿಸ್ ಸಹಕಾರಿಯಿಂದ ಸಿಬ್ಬಂದಿಗಳಿಗೆ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

0

ಕಾರವಾರ: ಸೈಂಟ್ ಮಿಲಾಗ್ರಿಸ್ ಸೌಹಾರ್ದ ಸಹಕಾರಿಯಿಂದ, ಸಹಕಾರಿಯ ಎಲ್ಲಾ 111 ಶಾಖೆಗಳ ಯಶಸ್ಸು ಸಾಧಿಸಿದ ಸಿಬ್ಬಂದಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ನ.18ರಂದು ನಗರದ ’ಅಜ್ವಿ ಓಶಿಯನ್ ಹಾಲ್’ನಲ್ಲಿ ಆಯೋಜಿಸಲಾಗಿತ್ತು.

ರಾಜ್ಯದ 9 ಜಿಲ್ಲೆಗಳಲ್ಲಿರುವ ಸಹಕಾರಿಯ ಎಲ್ಲಾ 111 ಶಾಖೆಗಳ ಶಾಖಾ ವ್ಯವಸ್ಥಾಪಕರು, ಅಭಿವೃದ್ಧಿ ವ್ಯವಸ್ಥಾಪಕರು, ಸಾಲ ವಸೂಲಾತಿ ಅಧಿಕಾರಿಗಳು, ಹಾಗೂ ಕಛೇರಿ ಸಿಬ್ಬಂದಿಗಳು ಕಳೆದ 2023-24ರ ಆರ್ಥಿಕ ವರ್ಷದಲ್ಲಿ ಯಶಸ್ಸು ಸಾಧಿಸಿ ಪ್ರಶಸ್ತಿಗೆ ಅರ್ಹರಾದ ಸಹಕಾರಿಯ ಸಿಬ್ಬಂದಿಗಳಿಗೆ ಆಡಳಿತ ಮಂಡಳಿಯಿಂದ ಪ್ರಶಸ್ತಿ ಹಾಗೂ ಪ್ರಮಾಣಪತ್ರ ವಿತರಿಸಿ ಅತ್ಯುತ್ತಮ ಸಾಧನೆಗೈದ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಂದನೀಯ ಫಾದರ್. ಡಾ. ಸ್ಟ್ಯಾನಿ ಪಿಂಟೋ ಸಹಕಾರಿಯ ಸಿಬ್ಬಂದಿಗಳಿಗೆ ವೃತ್ತಿ ಜೀವನದಲ್ಲಿ ಯಶಸ್ಸು ಸಾಧನೆಯ ಕುರಿತು ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಸಹಕಾರಿಯ ಅಧ್ಯಕ್ಷರಾದ ಜಾರ್ಜ್ ಫರ್ನಾಂಡೀಸ್, ಉಪಾಧ್ಯಕ್ಷರಾದ ಜಾಕೋಬ್ ಮೆಂಡೊನ್ಸಾ, ವ್ಯವಸ್ಥಾಪಕ ನಿರ್ದೇಶಕರಾದ ಕು.ಡೆಮಿ, ಸಹಕಾರಿಯ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ವರಿ ರಾಯ್ಕರ್, ಹಿರಿಯ ಮಾರ್ಗದರ್ಶಕರಾದ ಫ್ರಾನ್ಸಿಸ್ ಫರ್ನಾಂಡೀಸ್,.ಬಿ.ವಿ.ನಾಯಕ, ಅರವಿಂದ ನಾಯಕ, ಆಡಳಿತ ಸಲಹೆಗಾರರಾದ ವೆಲೆರಿಯನ್ ಫರ್ನಾಂಡೀಸ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ನವೀನ್ ವೆರ್ಣೇಕರ್ ಉಪಸ್ಥಿತರಿದ್ದರು. ಪ್ರಧಾನ ಕಛೇರಿಯ ಸಾಲ ವಸೂಲಾತಿ ವ್ಯವಸ್ಥಾಪಕರಾದ ಅರುಣ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ವಿನಯ್ ಹೆಗಡೆ ವಂದಿಸಿದರು.


ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೆ.ಡಿ.ಪೆಡ್ನೆಕರ್, ಡಾ.ಮಹೇಶ ಗೋಳಿಕಟ್ಟೆ, ಕೇಶವ ಭಟ್ಟ ಹಾಗೂ ಶೀಲಾ ರೋಡ್ರಿಗೀಸ್ ಉಪಸ್ಥಿತರಿದ್ದರು. ಶಾಖಾ ವ್ಯವಹಾರದ ಜೊತೆ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ ಪ್ರತಿಭೆಗಳಿಗೆ ಸಾಂಸ್ಕೃತಿಕ ವೇದಿಕೆ ಕಲ್ಪಿಸಲಾಯಿತು. ಶಾಖೆಗಳ ಸಿಬ್ಬಂದಿಗಳು ನೃತ್ಯ, ಸಂಗೀತ, ಕಲೆ ಹಾಗೂ ಸಾಹಿತ್ಯದಲ್ಲಿರುವ ತಮ್ಮ ಪ್ರತಿಭೆಯನ್ನು ಉತ್ಸಾಹದಿಂದ ಪ್ರದರ್ಶಿಸಿದರು. ವನಿತಾ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here