





ನೆಲ್ಯಾಡಿ: ಉಪ್ಪಿನಂಗಡಿ ಸೈಂಟ್ ಮೆರೀಸ್ ಪ್ರೌಢಶಾಲೆಯಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದ ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ನ ಇಬ್ಬರು ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ವಿದ್ಯಾರ್ಥಿಗಳಾದ ಭವಿಕ್ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ, ಅರ್ಚನಾ ಭರತನಾಟ್ಯದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಚಂಪಿಕಾ ಜನಪದ ಗೀತೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಚಾಲಕ ರೆ.ಫಾ ಹನಿ ಜೇಕಬ್, ಸಂಯೋಜಕ ರೆ.ಫಾ ಜಿಜನ್ ಅಬ್ರಹಾಂ, ಮುಖ್ಯಗುರು ಯಶೋಧರ ಕೆ., ಹಾಗೂ ಶಿಕ್ಷಕವೃಂದದವರು ಮಾರ್ಗದರ್ಶನ ನೀಡಿದ್ದರು. ಶಿಕ್ಷಕರಾದ ಸೋನು, ಕೃತಿ ಸಹಕರಿಸಿದರು.











