ಸುದ್ದಿ ಯುಟ್ಯೂಬ್ ಚಾನೆಲ್ ನಲ್ಲಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ಭಕ್ತಿಗೀತೆ ಬಿಡುಗಡೆ

0


ಬೆಟ್ಟಂಪಾಡಿ: ಪ್ರತಿಭಾನ್ವಿತ ಗಾಯಕಿ ಸಿಂಚನಾ ಎಂ. ಗೌಡ ಮಿತ್ತಡ್ಕ ಗಾಯನ ಮತ್ತು ರಾಗಸಂಯೋಜನೆ ಮಾಡಿರುವ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ  ‘ಸ್ವರಮಾಲೆ ಸಿಂಗಾರ – ಬೆಟ್ಟಂಪಾಡಿದ ಉಳ್ಳಾಯಗ್’ ತುಳು ಭಕ್ತಿಗೀತೆ ʻಸುದ್ದಿ ನ್ಯೂಸ್ ಪುತ್ತೂರು’ ಯುಟ್ಯೂಬ್ ಚಾನೆಲ್ ನಲ್ಲಿ ನ. 26 ರಂದು ಸಂಜೆ ಬಿಡುಗಡೆಗೊಂಡಿದೆ.


ಬೆಟ್ಟಂಪಾಡಿ ಶ್ರೀ ಕ್ಷೇತ್ರದ ವರ್ಷಾವಧಿ ಉತ್ಸವದ ವಿಶೇಷ ದೃಶ್ಯಗಳನ್ನೊಳಗೊಂಡಂತೆ ದೇವರ ಕಾರಣಿಕತೆ, ಕ್ಷೇತ್ರ ಸಾನಿಧ್ಯಗಳ ಕುರಿತಾದ ಭಕ್ತಿಗೀತೆ ಇದಾಗಿದ್ದು, ಉದಯ್ ಆರ್. ಪುತ್ತೂರು ಸಾಹಿತ್ಯ ಮತ್ತು ನಿರ್ದೇಶನ ನೀಡಿದ್ದಾರೆ. ಕದಿಕೆ ಸಿನೆಮಾಟಿಕ್ ನವರು ಸಂಕಲನ ಮಾಡಿದ್ದು, ಸಂಗೀತ ಸಂಯೋಜನೆಯನ್ನು ಮಿಥುನ್‌ರಾಜ್ ವಿದ್ಯಾಪುರ ಮಾಡಿದ್ದಾರೆ.

ಶ್ರೀ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ರವರ ಮಾರ್ಗದರ್ಶನದಲ್ಲಿ, ಕಾರ್ಕಳ ಸಮೃದ್ಧಿ ಅಲ್ಯುಮಿನಿಯಂನ ಮ್ಹಾಲಕ ಧನಂಜಯ ಬೆಟ್ಟಂಪಾಡಿ ಯವರ ಪ್ರಾಯೋಜಕತ್ವದಲ್ಲಿ ಈ ಗೀತೆ ಮೂಡಿಬಂದಿದೆ. ವಿಡಿಯೋ ದೃಶ್ಯಾವಳಿಗಳಲ್ಲಿ ಆರ್ಲಪದವು ಎಕೆ ಫೊಟೋಗ್ರಫಿಯ ಅವಿನಾಶ್ ಕುಲಾಲ್ ಮತ್ತು ರಂಜಿತ್ ತಲೆಪ್ಪಾಡಿ ಸಹಕರಿಸಿದ್ದಾರೆ. ಜಾತ್ರೋತ್ಸವದ ದಿನವಾದ ನ. 16 ರಂದು ವಿಧಾನಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಬಿ. ಯವರು ಈ ಗೀತೆಯ ಪೋಸ್ಟ್‌ರನ್ನು ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದ್ದರು. ಪ್ರತಿಭಾನ್ವಿತ ಗಾಯಕಿ ಸಿಂಚನಾ ಎಂ. ಗೌಡರವರು ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ ಜಯರಾಮ ಗೌಡ ಮತ್ತು ಸುಮಿತ್ರ ದಂಪತಿ ಪುತ್ರಿಯಾಗಿದ್ದಾರೆ.

LEAVE A REPLY

Please enter your comment!
Please enter your name here