ಪುತ್ತೂರು: ಮಂಗಳೂರು ಭಾರತೀಯ ವೈದ್ಯಕೀಯ ಸಂಘವು ರಾಜ್ಯೋತ್ಸವ ಜೀವಮಾನದ ಸಾಧನಾ ಪುರಸ್ಕಾರವನ್ನು ವೈದ್ಯಕೀಯ ಸೇವೆಯ ಜೊತೆಗೆ ನಾಡು ನುಡಿ ನೆಲ ಜಲ ಪರಿಸರ ಪ್ರಕೃತಿಯ ಉಳಿವಿಗಾಗಿ ಸಾಹಿತ್ಯ ಸಂಘಟನೆ ಹಾಗೂ ಜನಜಾಗೃತಿಯ ಮೂಲಕ ಮಾಡಿದ ಜೀವಮಾನದ ಸಾಧನೆಗೆ ಮಂಗಳೂರು ವೈದ್ಯಕೀಯ ಸಂಘ( ಐಎಂಎ) ದ ವತಿಯಿಂದ ಚೊಚ್ಚಲ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಐಎಮ್ಎ ನಿಯೋಜಿತ ಅಧ್ಯಕ್ಷ ಡಾ. ಎಂ. ಅಣ್ಣಯ್ಯ ಕುಲಾಲ್ ಅವರಿಗೆ ಪ್ರದಾನ ಮಾಡಿದೆ.
ಡಾ. ಶಾಂತರಾಮ್ ಶೆಟ್ಟಿ, ನಾಡೋಜ ಜಿ ಶಂಕರ್, ಬಹುಭಾಷಾ ಚಿತ್ರನಟ ಸುಮನ್ ತಲ್ವಾರ್, ನಿಟ್ಟೆ ವಿವಿಯ ಡಾ ಸತೀಶ್ ಭಂಡಾರಿ, ಆಕಾಶವಾಣಿಯ ವಸಂತ್ ಪೆರ್ಲ, ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹಾಲಿ ಅಧ್ಯಕ್ಷ ಡಾ ಶ್ರೀನಾಥ್ ಉಜಿರೆ ಸಹಿತ ಐಎಂಎಯ ಪದಾಧಿಕಾರಿಗಳು ಉಪಸ್ಥಿತರಿದ್ದರು.