ಮುರುಳ್ಯ: ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ 50 ವರ್ಷ ಪೂರೈಸಿದ ಆದರ್ಶ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಮುರುಳ್ಯ ಗ್ರಾಮದ ಒಕ್ಕೂಟ ರಚನೆ ಶ್ರೀ ರಾಮಾಂಜನೇಯ ಭಜನಾ ಮಂದಿರ ಸಮಹಾದಿಯಲ್ಲಿ ನ 27 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಶಾಂತಮ್ಮ ಮತ್ತು ಶ್ರೀ ಕೃಷ್ಣಪ್ಪ ಗೌಡ ಕಡಿರ ಮನೆ, ಶ್ರೀಮತಿ ದೇವಕಿ ಮತ್ತು ಶ್ರೀ.ಗುಡ್ಡಪ್ಪ ಗೌಡ ಕಡಿರ ಮನೆ,ಶ್ರೀ ಮತಿ ಮೀನಾಕ್ಷಿ ಮತ್ತು ಶ್ರೀ ಮೋನಪ್ಪ ಗೌಡ ತೋಟ ಮನೆ, ಶ್ರೀಮತಿ.ಪುಷ್ಪವತಿ ಶ್ರೀ. ಬೆಳಿಯಪ್ಪ ಗೌಡ ಗೋಳ್ತಿಲ ಮನೆ ಮುರುಳ್ಯ ಶ್ರೀ ಮತಿ ನೀಲಮ್ಮ ಶ್ರೀ ಮೇದಪ್ಪ ಗೌಡ ಶೇರ ಮನೆ, ಶ್ರೀಮತಿ ಯಮುನಶ್ರೀ ಪುಟ್ಟಣ್ಣ ಗೌಡ ಶೇರ ಮನೆ, ಶ್ರೀಮತಿ ಬಾಲಕ್ಕ ಶ್ರೀ. ಶೇಸಪ್ಪ ಗೌಡ ಶೇರ ಪಾಪುತಡಿ ಮನೆ ಮುರುಳ್ಯ ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ಡಿ ವಿ ಮನೋಹರ್, ದಶಮಾನೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್, ಮೇಲ್ವಿಚಾರಕ ವಿಜಯ್ ಕುಮಾರ್ ಹಾಗೂ ಶ್ರೀ ಮಹಿಷಮರ್ದಿನೀ ದೇವಸ್ಥಾನ ಕೇರ್ಪಡದ ಅಧ್ಯಕ್ಷ ವಸಂತ ಗೌಡ ನಡುಬೈಲು, ಊರ ಗೌಡರದ ಕೇಶವ ಗೌಡ ಗೋಳ್ತಿಲ ಹಾಗೂ ಹಿರಿಯರಾದ ವಿಠಲ ಗೌಡ ನಿಡ್ಡಜೆ, ಮುರುಳ್ಯ ಗ್ರಾಮ ಪಂಚಾಯತ್ ಸದಸ್ಯರಾದ ಶೀಲಾವತಿ ಗೋಳ್ತಿಲ, ಒಕ್ಕೂಟದ ಅಧ್ಯಕ್ಷ ಲಾಲು ಕೃಷ್ಣ, ಕಾರ್ಯದರ್ಶಿ ಅಶ್ವಥ್, ಉಪಾಧ್ಯಕ್ಷ ಭರತ್, ಜೊತೆ ಕಾರ್ಯದರ್ಶಿ ರಾಜೇಶ್,ಕೋಶಾಧಿಕಾರಿ ಸಾವಿತ್ರಿ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಪ್ರೇರಕ ಗಣೇಶ್ ಕುದ್ಮಾರು , ಮತ್ತು ಎಲ್ಲಾ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರೇರಕರಾದ ಗಣೇಶ್ ಸ್ವಾಗತಿಸಿದರು .ವಿಜಯ್ ಕುಮಾರ್ ನಿರೂಪಿಸಿದರು. ಗೀತಾ ವಂದಿಸಿದರು.