ವಿದ್ಯಾರ್ಥಿಗಳಿಗೆ ಶಿಕ್ಷಣ ಭವಿಷ್ಯದ ಬುನಾದಿಯಾಗುತ್ತದೆ: ಶ್ರೀನಿಧಿ ಕುಕ್ಕಿಲ
ವಿಟ್ಲ: ಇಲ್ಲಿನ ಬಸವನಗುಡಿಯಲ್ಲಿರುವ ವಿಠ್ಠಲ್ ಜೇಸಿ ಆಂಗ್ಲಮಾಧ್ಯಮ ಪ್ರೌಢ ಶಾಲಾ ವಾರ್ಷಿಕೋತ್ಸವ ಜೇಸಿ ಕಲರವ-2024 ಜರಗಿತು. ಸುಮಾರು 1091 ವಿದ್ಯಾರ್ಥಿಗಳ ವಿಭಿನ್ನ ಪ್ರತಿಭಾ ಪ್ರದರ್ಶನ 46 ಕಾರ್ಯಕ್ರಮಗಳ ಮೂಲಕ ಒಂದೇ ವೇದಿಕೆಯಲ್ಲಿ ಮೂಡಿಸುವ ಪ್ರಯತ್ನ ಸಾಪಲ್ಯ ಕಂಡಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲಾ ಹಳೆ ವಿದ್ಯಾರ್ಥಿ ಮಣಿಪಾಲ ತಾಂತ್ರಿಕ ಸಂಸ್ಥೆಯ ಸಂಶೋಧನ ವಿಭಾಗದ ಸಂಶೋಧಕ ಶ್ರೀನಿಧಿ ಕುಕ್ಕಿಲರವರು ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣ ಭವಿಷ್ಯದ ಬುನಾದಿಯಾಗುತ್ತದೆ. ಈ ಕರ್ತವ್ಯ ವಿದ್ಯಾಸಂಸ್ಥೆಗಳು ಮಾಡುತ್ತವೆ. ಅಂಕಗಳು ಮಾತ್ರ ಮುಖ್ಯವಲ್ಲ ಜೀವನ ಕೌಶಲ್ಯದ ದಾರಿ ತೋರುವ ಕಾರ್ಯ ಶಾಲೆಗಳಲ್ಲಿ ನಡೆಯಲಿ ಎಂದು ಮುಖ್ಯ ಎಂದರು.
ಕಾರ್ಕಳ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ನಾಯಕ ಅಲೋಕ್. ಸಿ. ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು. ಜೇಸಿ ಶಾಲಾ ವಿದ್ಯಾರ್ಥಿ ನಾಯಕ ಜ್ಞಾನೇಶ್ ಯನ್.ಡಿ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
2022 – 23 ನೇ ಸಾಲಿನ ಹತ್ತನೇ ತರಗತಿಯಲ್ಲಿ 90+ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಆಟೋಟ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು, ರಾಜ್ಯ ಪುರಸ್ಕಾರ ಪಡೆದ ಗೈಡ್ಸ್ ವಿದ್ಯಾರ್ಥಿಗಳಿಗೆ, ಹಾಗೂ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಲಾ ವಾರ್ಷಿಕ ಪತ್ರಿಕೆ “ವಿಷನ್” ಬಿಡುಗಡೆ ಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಶಾಲಾ ಅಧ್ಯಕ್ಷರಾಗಿದ್ದು ಅಗಲಿದ ದಿವಂಗತ ಎಲ್.ಎನ್.ಕೂಡೂರವರ ಭಾವಚಿತ್ರ ಅನಾವರಣಗೊಳಿಸಲಾಯಿತು. ನೋಂದಾಯಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ (RUPSA)ಕೊಡಮಾಡಿದ ಮರಣೋತ್ತರದ “ಶಿಕ್ಷಣ ಭೀಷ್ಮ ಪ್ರಶಸ್ತಿ”ಯ ಮಾಹಿತಿಯೊಂದಿಗೆ “ನುಡಿ ನಮನ” ಸಲ್ಲಿಸಲಾಯಿತು. ಮಹಿಮ ಆರ್. ಕೆ ಸ್ವಾಗತಿಸಿ, ಪ್ರಾಂಶುಪಾಲ ಜಯರಾಮ ರೈ ವರದಿ ವಾಚಿಸಿದರು.ವಿದ್ಯಾರ್ಥಿಗಳಾದ ಖತಿಜತ್ ಆಮಿಷ, ಜಿತಿನ್, ಅಭಿರಾಮ್, ಭವಿಷ್, ರಿಧಾ ಬೇಗಂ, ಅಶ್ವಿನಿ ಬಹುಮಾನದ ಪಟ್ಟಿ ವಾಚಿಸಿದರು. ನಿಧಿಕ್ಷಾ ವಂದಿಸಿದರು. ಯಾಶಿಕ ಕಾರ್ಯಕ್ರಮ ನಿರೂಪಿಸಿದರು.
ಮನಸ್ವಿನಿ ,ಆತ್ಮಿ ,ಸನೂಫ, ಸ್ವಸ್ತಿ ಕಾರ್ಯಕ್ರಮ ನೆರವೇರಿಸಿದರು. ಧಾತ್ರಿ ವಂದಿಸಿದರು. ತುಳಸಿ, ಸೌಮ್ಯಸಾವಿತ್ರಿ, ರೇಖಾ, ಅಪರ್ಣ ಸಹಕರಿಸಿದರು.
ಹಲವಾರು ವೈಶಿಷ್ಟ್ಯತೆಗಳೊಂದಿಗೆ ಸಂಪನ್ನಗೊಂಡ ಕಾರ್ಯಕ್ರಮ
ದೀಪ ಪ್ರಜ್ವಲನೆ, ಪ್ರಾರ್ಥನೆ, ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಗುತ್ತಾ, ವಿದ್ಯಾರ್ಥಿಗಳಿಂದ ಶಿಶುಗೀತೆ, ಪೌರಾಣಿಕ ರೂಪಕ, ನಾಟಕ, ಯಕ್ಷಗಾನ,ಕರಾಟೆ, ಬಹುಮುಖ ಪ್ರತಿಭೆಗಳಿಂದ ಒಂದೇ ವೇದಿಕೆಯಲ್ಲಿ ಬಹು ವಿಧದ ಸಂಗೀತ ಉಪಕರಣಗಳ ಸಂಯೋಜನೆ ಬೆರಗಾಗಿಸಿತು. ದೇಶ ಕಾಯುವ ಯೋಧರು, ಆಹಾರನೀಡುತ್ತಾ ದೇಶ ಸೇವೆ ಗೈಯುವ ಸೇವಕರಿಗೆ ನಮಿಸುತ್ತಾ, ರಾಷ್ಟೀಯ ಭಾವೈಕ್ಯತೆಯ ವಿಭಿನ್ನ ಕಾರ್ಯಕ್ರಮದೊಂದಿಗೆ ಸಮಾಪನಗೊಂಡಿತು.