ಪುತ್ತೂರು: ಡಿ.2 ಸೋಮವಾರದಿಂದ ಪುತ್ತೂರು ನಗರಸಭಾ ವ್ಯಾಪ್ತಿಯ ಪ್ರಮುಖ ರಸ್ತೆಗಳು ಸೇರಿದಂತೆ ಎಲ್ಲಾ ರಸ್ತೆಗಳ ಮರುಡಾಮರೀಕರಣ ಮತ್ತು ತೇಪೆ ಕಾರ್ಯ ಆರಂಭವಾಗಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.
ಈ ಬಾರಿ ವಿಪರೀತ ಮಳೆ ಇರುವ ಕಾರಣ ರಸ್ತೆಗಳು ಸಂಪೂರ್ಣ ಜಖಂಗೊಂಡಿದ್ದು ಮಾತ್ರವಲ್ಲದೆ ಹೊಂಡ ಗುಂಡಿಗಳಿಂದ ತುಂಬಿದೆ. ಮಳೆ ನಿಂತ ಬಳಿಕ ಕಾಮಗಾರಿ ಪ್ರಾರಂಭ ಮಾಡಬೇಕಾದ ಅನಿವಾರ್ಯತೆ ಮತ್ತು ಡಾಮಾರು ಉತ್ಪನ್ನಗಳ ಉತ್ಪಾದನೆ ಕಳೆದ ವಾರ ಪ್ರಾರಂಭ ಮಾಡಿರುವ ಕಾರಣ ಮರು ಡಾಮರೀಕರಣ ವಿಳಂಬವಾಗಿತ್ತು. ಸೋಮವಾರದಿಂದ ಕಾಮಗಾರಿ ಪ್ರಾರಂಭಗೊಂಡು ಶೀಘ್ರದಲ್ಲೇ ಎಲ್ಲಾ ನಾದುರಸ್ಥಿಯಲ್ಲಿರುವ ರಸ್ತೆಗಳ ದುರಸ್ಥಿ ಕಾರ್ಯ ಪೂರ್ಣಗೊಳ್ಳಲಿದೆ. ಅದೇ ರೀತಿ ಈ ಹಿಂದೆ ಶಂಕುಸ್ಥಾಪನೆಗೊಂಡ ಎಲ್ಲಾ ಕಾಮಗಾರಿಗಳೂ ಎರಡು ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಶಾಸಕರು ತಿಳಿಸಿದರು.