ಅಧ್ಯಕ್ಷ: ಶಿವರಾಮ ಗೌಡ ಬೊಳ್ಳಾಡಿ, ಕಾರ್ಯದರ್ಶಿ: ಅನಿಲ್ ರೈ ಬಾರಿಕೆ
ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ಒಳಮೊಗ್ರು ಶಕ್ತಿಕೇಂದ್ರದ 162 ನೇ ಬೂತ್‌ನ ನೂತನ ಅಧ್ಯಕ್ಷರಾಗಿ ಶಿವರಾಮ ಗೌಡ ಬೊಳ್ಳಾಡಿ ಹಾಗೂ ಕಾರ್ಯದರ್ಶಿಯಾಗಿ ಅನಿಲ್ ರೈ ಬಾರಿಕೆ ಆಯ್ಕೆಯಾಗಿದ್ದಾರೆ.
ನಿಕಟಪೂರ್ವ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಳ ರವರ ಮನೆಯಲ್ಲಿ ನಡೆದ ಸಭೆ ನಡೆಯಲ್ಲಿ ಒಳಮೊಗ್ರು ಶಕ್ತಿ ಕೇಂದ್ರದ ಪ್ರಭಾರಿ ಯತೀಂದ್ರ ಕೊಚ್ಚಿ ಹಾಗೂ ನೆ.ಮುಡ್ನೂರು ಮಹಾ ಶಕ್ತಿಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ ರವರ ಉಪಸ್ಥಿತಿಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಈ ಸಂದರ್ಭದಲ್ಲಿ ಒಳಮೊಗ್ರು ಶಕ್ತಿಕೇಂದ್ರದ ಅಧ್ಯಕ್ಷರಾದ ಎಸ್ ಮಾಧವ ರೈ ಕುಂಬ್ರ, ವಾರಿಜಾಕ್ಷಿ ಪಿ ಶೆಟ್ಟಿ ಮುಡಾಳ, ಜಗನ್ನಾಥ ಪೂಜಾರಿ ಮುಡಾಳ, ಜಯಂತ ಪೂಜಾರಿ ಮುಡಾಳ, ರಮೇಶ್ ಗೌಡ ಬೊಳ್ಳಾಡಿ, ತೇಜಸ್ ಎಂ ಆರ್ ಮುಡಾಳ, ಸಂದೇಶ ಪೂಜಾರಿ ಉಪಸ್ಥಿತರಿದ್ದರು.ಶ್ರೀನಿವಾಸ ಪ್ರಸಾದ್ ಮುಡಾಳ ಸ್ವಾಗತಿಸಿ,ಉಷಾ ನಾರಾಯಣ ಗೌಡ ಉರ್ವ ವಂದಿಸಿದರು.