ಪುತ್ತೂರು ನಗರ ಪೊಲೀಸ್‌ ಠಾಣಾ ಮುಂಭಾಗ ಬಿಜೆಪಿಯಿಂದ ದಿಢೀರ್‌ ಪ್ರತಿಭಟನೆ- ಕಾರಣ ಇಲ್ಲಿದೆ…

0

ಪುತ್ತೂರು: ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರ ಕುರಿತು ಫೇಸ್‌ ಬುಕ್‌ ನಲ್ಲಿ ಅವಹೇಳನಕಾರಿ ಬರಹಕ್ಕೆ ಸಂಬಂಧಿಸಿ ದೂರು ಸ್ವೀಕರಿಸಲು ಪುತ್ತೂರು ಪೊಲೀಸ್‌ ಠಾಣಾ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ನಗರ ಪೊಲೀಸ್‌ ಠಾಣಾ ಮುಂಭಾಗ ನಗರಸಭೆಯ ಬಿಜೆಪಿ ಸದಸ್ಯರು, ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಆರೋಪಿ ವಿರುದ್ಧ ಪೊಲೀಸರು ಎಫ್‌ ಐ ಆರ್‌ ದಾಖಲಾಗುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಬಿಜೆಪಿಯವರು ಪಟ್ಟು ಹಿಡಿದಿದ್ದಾರೆ.ಈ ವೇಳೆ ರೊಚ್ಚಿಗೆದ್ದ ಸಂಜೀವ ಮಠಂದೂರು ಮಾತನಾಡಿ ಕಿಡಿಗೇಡಿಯ ವಿರುದ್ಧ ಕ್ರಮಕ್ಕೆ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನು ಮನಗಂಡ ನಗರ ಪೊಲೀಸ್‌ ಠಾಣಾ ಅಧಿಕಾರಿ ದೂರು ದಾಖಲಿಸುವ ಭರವಸೆಯನ್ನು ನೀಡಿದ್ದಾರೆ. ಆ ಬಳಿಕ ಧರಣಿಯನ್ನು ಹಿಂಪಡೆಯಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here