ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ನಿಡ್ಪಳ್ಳಿ ಒಕ್ಕೂಟದ ತ್ರೈಮಾಸಿಕ ಸಭೆ ಅಧ್ಯಕ್ಷ ರಾಧಾಕೃಷ್ಣ ಪಾಟಾಳಿಯವರ ಅಧ್ಯಕ್ಷತೆಯಲ್ಲಿ ಡಿ.1 ರಂದು ನಿಡ್ಪಳ್ಳಿ ಶಾಲೆಯಲ್ಲಿ ನಡೆಯಿತು.
ವಲಯ ಮೆಲ್ವೀಚಾರಕ ಸೋಹನ್ ರವರು ಎಸ್.ಕೆ.ಡಿ.ಅರ್.ಡಿ.ಪಿ ಲೀಡ್ app ಬಗ್ಗೆ ಮಾಹಿತಿ ನೀಡಿ ಈ app ನಿಂದ ನಾವು ತೆಗೆಯುವ ಸಾಲಕ್ಕೆ ವಿಧಿಸಿದ ಬಡ್ಡಿ ಮತ್ತು ವಾರಕ್ಕೆ ಕಟ್ಟುವ ಕಂತುಗಳ ವಿವರಣೆ ಬಗ್ಗೆ ತಿಳಿಸಿದರು.ಸಾರ್ವಜನಿಕವಾಗಿ ಯೋಜನೆಯ ಸಾಲದ ಬಡ್ಡಿ ಬಗ್ಗೆ ಇರುವ ಅಪಪ್ರಚಾರಕ್ಕೆ ಸರಿಯಾದ ಉತ್ತರ ಇದರಲ್ಲಿ ದೊರೆಯುತ್ತದೆ. ಸದಸ್ಯರು ಇದರ ಬಗ್ಗೆ ತಿಳಿದುಕೊಂಡು ತೆಗೆದ ಸಾಲವನ್ನು ಸರಿಯಾಗಿ ಉಪಯೋಗಿಸಿ ಕಂತು ಬಾಕಿಯಾಗದ ರೀತಿಯಲ್ಲಿ ಮರುಪಾವತಿ ಮಾಡಿ ತಮ್ಮ ಅಭಿವೃದ್ಧಿ ಪಡಿಸುವಂತೆ ಮಾಹಿತಿ ನೀಡಿದರು.
ಸೇವಾ ಪ್ರತಿನಿಧಿ ಶಾಲಿನಿ ಕೆ ಮಾಹಿತಿ ನೀಡಿ ವಾರದ ಸಭೆಯನ್ನು ವಾರ ವಾರ ಕ್ರಮವತ್ತಾಗಿ ಮಾಡಿದರೆ ಸಮಸ್ಯೆ ಬರುವುದಿಲ್ಲ. ಸದಸ್ಯರು ಒಕ್ಕೂಟ ಸಭೆಯಲ್ಲಿ ಭಾಗವಹಿಸಿದರೆ ಮಾಹಿತಿ ಸಿಗುತ್ತದೆ.ಒಳ್ಳೆಯ ಮಾಹಿತಿ ಇರುವ ನಿರಂತರ ಮಾಸ ಪತ್ರಿಕೆಯನ್ನು ಎಲ್ಲರೂ ಚಂದಾದಾರರಾಗುವಂತೆ ತಿಳಿಸಿದರು.
ದಿವ್ಯಜ್ಯೋತಿ ಸ್ವ ಸಹಾಯ ಸಂಘದ ಪುಷ್ಪಾವತಿ ಸ್ವಾಗತಿಸಿದರು. ಜವಾಬ್ದಾರಿ ತಂಡಗಳಾದ ಜ್ಞಾನದೀಪ ಸ್ವ ಸಹಾಯ ಸಂಘದ ವಿನುತಾ, ಶ್ರೀಕೃಷ್ಣ ಪ್ರಗತಿ ಬಂದು ತಂಡದ ರಾಮಚಂದ್ರ ಮಣಿಯಾಣಿ ವರದಿ ವಾಚಿಸಿದರು. ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಒಕ್ಕೂಟದ ವರದಿ ವಾಚಿಸಿ ಪ್ರತೀಮಾ ಆಚಾರ್ಯ ವಂದಿಸಿದರು.ಒಕ್ಕೂಟದ ಕೋಶಾಧಿಕಾರಿ ತಿಮ್ಮಪ್ಪ ಕಾರ್ಯಕ್ರಮ ನಿರೂಪಿಸಿದರು.