ಪುತ್ತೂರು: ಭಾರತೀಯ ಜನತಾ ಪಾರ್ಟಿ ನರಿಮೊಗರು 146ನೇ ಬೂತ್‌ನ ನೂತನ ಅಧ್ಯಕ್ಷರಾಗಿ ಶೇಖರ್ ಗೌಡ ಅನಾಜೆ, ಕಾರ್ಯದರ್ಶಿಯಾಗಿ ಪ್ರವೀಣ್ ಗೌಡ ಕುಕ್ಕುತಡಿಯವರು ಆಯ್ಕೆಯಾಗಿದ್ದಾರೆ.
ಬೂತ್‌ನ ನೂತನ ಸದಸ್ಯರಾಗಿ ಕರುಣಾಕರ ಗೌಡ, ಚಿತ್ರ, ಗಣೇಶ್ ನಾಯಕ್, ನಾರಾಯಣ ಗೌಡ, ವಿಶ್ವನಾಥ, ರವಿ ಎರಕಡಪು, ಪದ್ಮನಾಭ ನಾಯ್ಕ್, ಸುಭಾಷ್ ರೈ ಅಳಕೆ, ಕುಸುಮ ದೇರಣ್ಣ, ಪದ್ಮಪ್ಪ ಆಯ್ಕೆಯಾಗಿದ್ದಾರೆ.
ನರಿಮೊಗರು ಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಿಪ್ರಸಾದ್ ಅವರ ಮನೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿಲ್ಲಾ ಸದಸ್ಯತ್ವ ಜಿಲ್ಲಾ ಸಂಚಾಲಕರು ಮತ್ತು ಚುನಾವಣಾ ಸಹಯೋಗಿಯಾಗಿರುವ ನಿತೇಶ್ ಕುಮಾರ್ ಶಾಂತಿವನ ಇವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
Home ಇತ್ತೀಚಿನ ಸುದ್ದಿಗಳು ನರಿಮೊಗರು 146ನೇ ಬಿಜೆಪಿ ಬೂತ್ ಸಮಿತಿಗೆ ಆಯ್ಕೆ- ಅಧ್ಯಕ್ಷ ಶೇಖರ್ ಗೌಡ, ಕಾರ್ಯದರ್ಶಿ ಪ್ರವೀಣ್ ಗೌಡ