ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ಒಳಮೊಗ್ರು ಶಕ್ತಿಕೇಂದ್ರದ 163ನೇ ಬೂತ್ ನ ನೂತನ ಅಧ್ಯಕ್ಷರಾಗಿ ಜಯರಾಮ ಆಚಾರ್ಯ ಮುರುವ ಹಾಗೂ ಕಾರ್ಯದರ್ಶಿಯಾಗಿ ಸತೀಶ್ ರೈ ಪೆರದನೆ ಯವರು ಆಯ್ಕೆಯಾಗಿದ್ದಾರೆ. ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹಾಗೂ ನೆ.ಮುಡ್ನೂರು ಮಹಾ ಶಕ್ತಿಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ ರವರ ಉಪಸ್ಥಿತಿಯಲ್ಲಿ ನಡೆದ ಪ್ರಕ್ರಿಯೆಯಲ್ಲಿ ಒಟ್ಟು 12 ಸದಸ್ಯ ಬಲದ ನೂತನ ಸಮಿತಿಯು ಜಯರಾಮ ಆಚಾರ್ಯರವರ ಮನೆಯಲ್ಲಿ ನಡೆದ ಸಭೆಯಲ್ಲಿ ರಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಒಳಮೊಗ್ರು ಶಕ್ತಿಕೇಂದ್ರದ ಅಧ್ಯಕ್ಷರಾದ ಎಸ್ ಮಾಧವ ರೈ ಕುಂಬ್ರ, ರಾಧಾಕೃಷ್ಣ ಶೆಟ್ಟಿ ಕಲ್ಲಡ್ಕ, ಗೋವಿಂದ ನಾಯ್ಕ ಗುರಿಕುಮೇರು, ದಾಮೋದರ ಆಚಾರ್ಯ, ಮೋಹನ್ ನಾಯ್ಕ ಗುರಿಕುಮೆರು, ಅಕ್ಷಯ್ ಕುಲಾಲ್ ಬೈರಮೂಲೆ, ಉಮೇಶ್ ಗುರಿಕುಮೆರು, ಹರಿಪ್ರಸಾದ್ ಪರಲ್ತಡ್ಕ, ಜಗದೀಶ್ ಆಚಾರ್ಯ ಮುರುವ, ಪ್ರಸಾದ್ ಆಚಾರ್ಯ ಮುರುವ, ಸುಕನ್ಯಾ ಆಚಾರ್ಯ, ಕಲಾವತಿ ಆಚಾರ್ಯ ಉಪಸ್ಥಿತರಿದ್ದರು. ಸುಧಾಕರ ಆಳ್ವ ಕಲ್ಲಡ್ಕ ಸ್ವಾಗತಿಸಿ, ಚಂದ್ರಕಲಾ ಆಚಾರ್ಯ ವಂದಿಸಿದರು.
Home ಇತ್ತೀಚಿನ ಸುದ್ದಿಗಳು ಒಳಮೊಗ್ರು ಬಿಜೆಪಿ 163ನೇ ಬೂತ್‌ಗೆ ಆಯ್ಕೆ- ಅಧ್ಯಕ್ಷ: ಜಯರಾಮ ಆಚಾರ್ಯ, ಕಾರ್ಯದರ್ಶಿ: ಸತೀಶ್ ರೈ