ಪುತ್ತೂರು: ನಗರಸಭಾ ವ್ಯಾಪ್ತಿಯ ನೆಕ್ಕರೆ ಎಂಬಲ್ಲಿ ಅನಾಧಿಕಾಲದಿಂದ ಆರಾಧಿಸಿಕೊಂಡು ಬಂದಿದ್ದ ಶ್ರೀ ನಾಗರಕ್ತೇಶ್ವರೀ, ಪಂಜುರ್ಲಿ, ಗುಳಿಗ, ಕಲ್ಲುರ್ಟಿ ದೈವದ ಸಾನಿಧ್ಯ ಜೀರ್ಣಾವಸ್ಥೆಯಲ್ಲಿದ್ದು ಸ್ಥಳೀಯ ನಿವಾಸಿಗಳ ಒಗ್ಗೂಡುವಿಕೆಯೊಂದಿಗೆ ಶ್ರೀ ನಾಗರಕ್ತೇಶ್ವರೀ ಸೇವಾ ಟ್ರಸ್ಟ್ ರಚಿಸುವ ಚಿಂತನೆಯಂತೆ ನ.30ರಂದು ನೋಂದಾಯಿತ ಸಂಘವನ್ನು ಲೋಕಾರ್ಪಣೆ ಮಾಡಲಾಯಿತು.
ಟ್ರಸ್ಟ್ ಸದಸ್ಯ ರಾಜಶೇಖರ ಜೈನ್ ಅಧ್ಯಕ್ಷತೆಯಲ್ಲಿ ಸರಳ ಸಮಾರಂಭದಲ್ಲಿ ಉದ್ಘಾಟನೆ ನಡೆಯಿತು. ಟ್ರಸ್ಟ್ ಸದಸ್ಯ ಶ್ರೀ ಬಾಲಕೃಷ್ಣ ಗೌಡ, ಕೇಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀ ಕೇಶವ ಪೂಜಾರಿ ಬೆದ್ರಾಳ, ಸ್ಥಳೀಯ ದೈವಾರಾಧಕ ನಾಗೇಶ್ ಪೂಜಾರಿ, ಬಾಬು ನಾಯ್ಕ, ಸ್ಥಳೀಯರಾದ ಕೇಶವ, ದಸ್ತಾವೇಜು ಬರಹಗಾರ ಸುದರ್ಶನ್ ಅತಿಥಿಗಳಾಗಿ ಭಾಗವಹಿಸಿದರು. ಸಭಾ ನಿರ್ವಾಹಕ ಹೊನ್ನಪ್ಪ ಪೂಜಾರಿಯವರು ಪ್ರಸ್ತಾವಿಕ ಮಾತನಾಡಿದರು. ಸುದರ್ಶನ್ ರವರು ಟ್ರಸ್ಟ್‌ನ ಉದ್ದೇಶ ಮತ್ತು ರೂಪುರೇಷೆಗಳನ್ನು ಸಭೆಗೆ ವಿವರಿಸಿದರು.
ಶ್ರೀಮಾ ಥೀಮ್ ಪಾರ್ಕ್ ವತಿಯಿಂದ ದೈವಗಳ ಪ್ರತಿಷ್ಠಾಪನೆ
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಸದಸ್ಯ ರಾಜಶೇಖರ ಜೈನ್ ಕಾರಣಿಕ ಕ್ಷೇತ್ರ ಅಪವಿತ್ರವಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಮತ್ತು ಸ್ಥಳೀಯರ ಬೇಡಿಕೆಗಾಗಿ ಶ್ರೀಮಾ ಥೀಮ್ ಪಾರ್ಕ್ ವತಿಯಿಂದ ದೈವಗಳ ಪ್ರತಿಷ್ಠಾಪನೆ ಮಾಡಿ ಪರಿಸರ ವಾಸಿಗಳ ಆತಂಕ ನಿವಾರಣೆ ಮಾಡಿ ಮೂಲಭೂತ ಸೌಕರ್ಯ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದೆಂದು ಭರವಸೆ ನೀಡಿದರು.
ಮೂಲಭೂತ ಸೌಕರ್ಯ ಅಭಿವೃದ್ಧಿ:
ನಗರಸಭೆ ಮಾಜಿ ಸದಸ್ಯ ನವೀನ್ ನಾಕ್ ಅವರು ಮಾತಾಡಿ ಇಲ್ಲಿ ಆರಂಭಿಸಲಾಗಿರುವ ಶ್ರೀಮಾ ಥೀಮ್ ಪಾರ್ಕ್ ಈ ಪ್ರದೇಶದ ಅಭಿವೃದ್ಧಿಗೆ ಸಹಕರಿಯಾಗಲಿದೆ ಎಂದು ಶುಭ ಹಾರೈಸಿ ಸ್ಥಳೀಯ ನಗರಸಭಾ ಸದಸ್ಯರ, ಶಾಸಕರ, ಸಂಸದರ ನೆರವು ಪಡೆದು ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು. ಸಭೆಯ ಬಳಿಕ ಶ್ರೀ ಕೇಶವರು ಹಿಂದಿನಿಂದ ದೈವಗಳಿಗೆ ನಡೆಸಲ್ಪಡುತ್ತಿದ್ದ ತಂಬಿಲಾದಿ ಪೂಜೆ ಗಳನ್ನು ಪ್ರತಿಷ್ಟಾಪನೆ ಯ ಬಳಿಕ ಕಾಲ ಕಾಲಕ್ಕೆ ನೆರವೇರಿಸುವ ದೈವ ಸಂಕಲ್ಪ ನೇರವೇರಿಸಿ ಪ್ರತಿಷ್ಟಾಪನೆ ಅಡ್ಡಿಯಾಗದಂತೆ ಪ್ರಾರ್ಥಿಸಲಾಯಿತು.
ಡಿ.22, 23ಕ್ಕೆ ಪುನಃ ಪ್ರತಿಷ್ಠಾಪನೆ:
300 ವರ್ಷಗಳಿಂದಲೂ ಪೂರ್ವದಲ್ಲಿ ಆರಾಧಿಸಿಕೊಂಡಿದ್ದ ಶ್ರೀ ನಾಗರಕ್ತೇಶ್ವರೀ, ಪಂಜುರ್ಲಿ, ಗುಳಿಗ, ಕಲ್ಲುರ್ಟಿ ದೈವ ಕಾಲಾ ನಂತರ ಜೀರ್ಣಾವಸ್ಥೆಯಲ್ಲಿದ್ದ ಕಾರಣಕ್ಕೆ ಸ್ಥಳೀಯ ವಾಸಿಗಳು, ಪ್ರಾಣಿ ಪಕ್ಷಿಗಳು ಸಾವು ನೋವುಗಳಿಗೆ ತುತ್ತಾದ ಕಾರಣಕ್ಕೆ ದಾನಿಗಳ ನೇರವು ಹಸ್ತದೊಂದಿಗೆ ಡಿ. 22,23 ರಂದು ಪುನಃ ಪ್ರತಿಷ್ಟಾಪನೆಗೊಳ್ಳಲಿದ್ದು ಎಲ್ಲರ ಸಹಕಾರ ಮತ್ತು ಉಸ್ಥಿತಿಯನ್ನು ನಿವೇದಿಸಲಾಯಿತು.