ಕೋರಂ ಕೊರತೆ ಹಿನ್ನೆಲೆ- ಕೋಡಿಂಬಾಡಿ ಗ್ರಾ.ಪಂ ಸಾಮಾನ್ಯ ಸಭೆ ರದ್ದು

0

ಪುತ್ತೂರು: ಕೋಡಿಂಬಾಡಿ ಗ್ರಾ.ಪಂನಲ್ಲಿ ಡಿ.4ರಂದು ನಡೆಯಬೇಕಿದ್ದ ಸಾಮಾನ್ಯ ಸಭೆಯು ಸದಸ್ಯರ ಕೋರಂ ಕೊರತೆಯ ಹಿನ್ನೆಲೆಯಲ್ಲಿ ರದ್ದುಗೊಂಡಿದೆ.
ಪಂಚಾಯತ್ ನ.11 ಮಂದಿ ಸದಸ್ಯರ ಪೈಕಿ ಅಧ್ಯಕ್ಷೆ ಮಲ್ಲಿಕಾ, ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಸದಸ್ಯರಾದ ಉಷಾ ಲಕ್ಷ್ಮಣ ಪೂಜಾರಿ, ಪುಷ್ಪಾ ಮಾತ್ರ ಸಭೆಗೆ ಹಾಜರಾಗಿದ್ದರು. ಉಳಿದಂತೆ ಜಗನ್ನಾಥ ಶೆಟ್ಟಿ ನಡುಮನೆ, ಗೀತಾ, ಪೂರ್ಣಿಮಾ, ರಾಮಣ್ಣ ಗೌಡ ಗುಂಡೋಳೆ, ರಾಮಚಂದ್ರ ಪೂಜಾರಿ ಶಾಂತಿನಗರ, ವಿಶ್ವನಾಥ ಹಾಗೂ ಮೋಹಿನಿಯವರು ಸಭೆಗೆ ಗೈರಾಗಿದ್ದರು. ಹೀಗಾಗಿ ಸಭೆಯು ರದ್ದುಗೊಂಡಿರುವುದಾಗಿ ತಿಳಿದುಬಂದಿದೆ.

LEAVE A REPLY

Please enter your comment!
Please enter your name here