ಆಲಂಕಾರು: ಪೆರಾಬೆ ಗ್ರಾಮದ ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಡಿ.5 ರಿಂದ ಡಿ.7 ರ ತನಕ ಚೌತಿ,ಪಂಚಮಿ,ಷಷ್ಠಿ ಉತ್ಸವ ನಡೆಯಲಿದೆ.
ಡಿ.5 ರಂದು ಬೆಳಿಗ್ಗೆ 8:00 ರಿಂದ ಚೌತಿ ಉತ್ಸವ, ಗಣಪತಿ ಹೋಮ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ,ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ದೇವರಗುಡ್ಡೆ,ಪೂಂಜಾ,ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಬಲ್ಯ ಇವರಿಂದ ಭಜನೆ ನಡೆದು ಮಧ್ಯಾಹ್ನ ಗಂಟೆ 12 :00 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಂಜೆ 5:00 ರಿಂದ ಸಾಂಸ್ಕೃತಿಕ ಕಲಾ ವೇದಿಕೆ ಉದ್ಘಾಟನೆ ನಡೆಯಲಿದೆ.
ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಆರ್ಚಕರಾದ ರಾಮಕೃಷ್ಣ ಅಸ್ರಣ್ಣ,ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆರ್ಚಕರಾದ ಶ್ರೀ ಕಟೀಲ್ ಅಸ್ರಣ್ಣ ನವರು, ಉಡುಪಿ ಶ್ರೀ ಭಾರತೀಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ರಾಜಶೇಖರ ಹೆಬ್ಬಾರ ,ಶ್ರೀ ಸೋಮನಾಥೇಶ್ವರ ದೇವಸ್ಥಾನ ಇರಾದ ಆಡಳಿತ ಮೊಕ್ತೇಸರರಾದ ದೇವಿಪ್ರಸಾದ್ ಶೆಟ್ಟಿ,ಶ್ರೀ ಕ್ಷೇತ್ರ ಪಡುಮಲೆಯ ಸಂಚಾಲಕರಾದ ಚರಣ್, ಬಾರಿಂಗಲಗುತ್ತು ಇಡ್ಯಡ್ಕ ಮೋಹನ ಗೌಡ ರವರ ಉಪಸ್ಥಿತಿಯಲ್ಲಿ ಸಾಂಸ್ಕೃತಿಕ ಕಲಾವೇದಿಕೆ ಉದ್ಘಾಟನೆಗೊಂಡು ರಾತ್ರಿ ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ, ಕಟೀಲು (3ನೇ ಮೇಳ) ಇವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಡಿ.6 ಶುಕ್ರವಾರ ಬೆಳಗ್ಗೆ ಪಂಚಮಿ ಉತ್ಸವ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸರ್ವಸೇವೆ, ನಾಗಾರಾಧನೆ, ಶ್ರೀ ಆದಿಶಕ್ತಿ ಭಜನಾ ಮಂಡಳಿ ಶ್ರೀ ಕ್ಷೇತ್ರ ಶರವೂರು, ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ಕಡಬ ಇವರಿಂದ ಭಜನೆ ನಡೆದು ಮಧ್ಯಾಹ್ನ ಗಂಟೆ12-೦೦ಕ್ಕೆ: ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಂಜೆ 5:00 ರಿಂದ ಸಾಮೂಹಿಕ ಕುಂಕುಮಾರ್ಚನೆ, ರಾತ್ರಿ ಗಂಟೆ 7:30 ರಿಂದ ಶ್ರೀ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, ರಾತ್ರಿ ಗಂಟೆ 9-೦೦ಕ್ಕೆ : ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಡಿ.7 ಶನಿವಾರ ಬೆಳಗ್ಗೆ ಗಂಟೆ 8-೦೦ರಿಂದ : ಷಷ್ಠಿ ಉತ್ಸವ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ನವಕಲಶಾಭಿಷೇಕ, ಸರ್ವಸೇವೆ, ಮಂತ್ರಾಕ್ಷತೆ, ಬ್ರಾಹ್ಮಣ ಸುಹಾಸಿನಿ ಆರಾಧನೆ, ಮಾಸಿಕ ಗಣಪತಿ ಹೋಮ,ಸುರುಳಿ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಭಕ್ತಾಧಿಗಳಿಂದ ,ಶ್ರೀ ಶಾರದಾ ಭಜನಾ ಮಂಡಳಿ ಕುಂತೂರು ಇವರಿಂದ ಮಕ್ಕಳ ಕುಣಿತ ಭಜನೆ, ಬೆಳಗ್ಗೆ ಗಂಟೆ 10:30 ರಿಂದ ಧಾರ್ಮಿಕ ಪ್ರವಚನ ವಿದ್ವಾನ್ ಕಿರಣ್ ಕುಮಾರ ಪಡುಪಣಂಬೂರು, ಮಧ್ಯಾಹ್ನ ಗಂಟೆ 12-೦೦ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು, ಸಂಜೆ ಗಂಟೆ 6-೦೦ಕ್ಕೆ : ಕುಣಿತ ಭಜನೆ , ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಶಿವಾರು ಇವರಿಂದ ರಾತ್ರಿ ಗಂಟೆ 8-೦೦ಕ್ಕೆ : ರಂಗಪೂಜೆ, ಮಾಸಿಕ ದುರ್ಗಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಉತ್ಸವದಲ್ಲಿ ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿ, ಶ್ರೀ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಖಾಯಂ ಟ್ರಸ್ಟಿ ಯಂ. ರಾಮಮೋಹನ್ ರೈ ಸುರುಳಿ,ಟ್ರಸ್ಟ್ ಅಧ್ಯಕ್ಷರಾದ ಯಂ.ಕೃಷ್ಣಕುಮಾರ ಅತ್ರಿಜಾಲು,ಉಪಾಧ್ಯಕ್ಷ ರಾದ ರಾಧಾಕೃಷ್ಣ ರೈ ಪರಾರಿಗುತ್ತು,ಕಾರ್ಯದರ್ಶಿ ಸತೀಶ್ ಪೂಂಜಾ,ಕೋಶಾಧಿಕಾರಿ ಸಂತೋಷ ರಾವ್ ಕುಂಞಕ್ಕು,ಜತೆ ಕಾರ್ಯದರ್ಶಿ ವಿನೋದ್ ಕುಮಾರ್ ರೈ,ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾದ ಪ್ರಶಾಂತ ರೈ ಮನವಳಿಕೆ,ಕಾರ್ಯದರ್ಶಿ ಹೇಮಚಂದ್ರ ಸುರುಳಿ, ನಿತ್ಯಪೂಜಾ ಸಮಿತಿಯ ಅಧ್ಯಕ್ಷರಾದ ಗಂಗಾಧರ ಪೂಜಾರಿ, ಸಾಂಸ್ಕೃತಿಕ ಕಲಾ ವೇದಿಕೆಯ ಅಧ್ಯಕ್ಷರಾದ ಪ್ರದೀಪ್ ರೈ ಮನವಳಿಕೆ ಹಾಗು ಪದಾಧಿಕಾರಿಗಳು ಮತ್ತು ಸದಸ್ಯರು ,ಅರ್ಚಕರು, ಸಿಬ್ಬಂದಿ ವರ್ಗದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.