ಕಾಣಿಯೂರು: ಬೊಬ್ಬೆಕೇರಿ ಸ. ಹಿ. ಪ್ರಾ. ಶಾಲೆಯಲ್ಲಿ ನಡೆಯಲಿರುವ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಸಹಾಯನಿಧಿ ಕೂಪನ್ ಡಿ.4ರಂದು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಎಸ್. ಡಿ. ಎಂ.ಸಿ ಅಧ್ಯಕ್ಷೆ ಸುನೀತಾ ಗಣೇಶ್, ಉಪಾಧ್ಯಕ್ಷ ರಮೇಶ್ ಉಪ್ಪಡ್ಕ, ಮುಖ್ಯಗುರು ಶಶಿಕಲಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಕೋಶಾಧಿಕಾರಿ ಸುಕುಮಾರ್ ಕಲ್ಪಡ, ಚಿಣ್ಣರ ಮಂಟಪದ ಅಧ್ಯಕ್ಷ ಮಹೇಶ್ ಪೈಕ, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ತೀರ್ಥ ಕುಮಾರ್ ಪೈಕ, ಸದಾನಂದ ಕಡೀರ, ಸದಸ್ಯರಾದ ಸೋಮನಾಥ ದರ್ಖಾಸು, ಸುಧಾಕರ್ ಕಾಣಿಯೂರು, ಶೋಭಾ ಉಪ್ಪಡ್ಕ, ಮಾಯಿಲಪ್ಪ ಗೌಡ, ಶಿಕ್ಷಕರಾದ ಜನಾರ್ದನ ಹೇಮಳ, ಗೀತಾ ಕುಮಾರಿ, ಶೃತಿ, ದಿವ್ಯಾ, ಜಯಲತಾ, ಸುಶ್ಮಿತಾ ಉಪಸ್ಥಿತರಿದ್ದರು