ಪುತ್ತೂರು: ದರ್ಬೆ ಕೂರ್ನಡ್ಕ ಕೆಮ್ಮಿಂಜೆ ದೇವಸ್ಥಾನದ ದ್ವಾರದ ಬಳಿ ಕಾರುಗಳ ಸರ್ವೀಸ್ಗೆ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುವ ಎಕ್ಸ್ಕ್ಲೂಸಿವ್ ಶೋರೂಂ ಅರಸು ಡಿಟೇಲಿಂಗ್ ಕೆಫೆ ಡಿ.6ರಂದು ಬೆಳಿಗ್ಗೆ ೧೦ ಗಂಟೆಗೆ ಶುಭಾರಂಭಗೊಳ್ಳಲಿದೆ.
ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಮುರಳಿಕೃಷ್ಣ ಹಸಂತಡ್ಕ, ಉದ್ಯಮಿಗಳಾದ ಉಜ್ವಲ್ ಪ್ರಭು, ವೆಂಕಟ್ರಮಣ ಭಟ್ ದೇರ್ಕಜೆ, ಪ್ರಸನ್ನ ಕುಮಾರ್ ಶೆಟ್ಟಿ, ಸಹಜ್ ರೈ ಬಳಜ್ಜ, ಅಶ್ರಫ್ ಪುತ್ತೂರು, ಅಬ್ದುಲ್ ಖಾದರ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ನಮ್ಮಲ್ಲಿ ಫೋಮ್ ವಾಶ್, ಇಂಟೀರಿಯರ್ ಕ್ಲೀನಿಂಗ್, ಸಿರಾಮಿಕ್ ಕೋಟಿಂಗ್, ಪೈಂಟ್ ಪ್ರೊಟೆಕ್ಷನ್, ವ್ಯಾಕ್ಸ್ ಪಾಲಿಶಿಂಗ್, ಅಕ್ಸೆಸರೀಸ್, ಸೆಕೆಂಡ್ ಹ್ಯಾಂಡ್ ಕಾರ್ ಸೇಲ್ಸ್, ರೆಂಟಲ್ ಕಾರುಗಳು ಒಂದೇ ಸೂರಿನಡಿಯಲ್ಲಿ ದೊರೆಯುವ ಎಕ್ಸ್ಕ್ಲೂಸಿವ್ ಶೋರೂಂ ಇದಾಗಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮಾಲಕರುಗಳಾದ ಸರ್ವೇಶ್ ರಾಜ್, ಹೇಮಂತ್ ಪೂಜಾರಿಯವರು ತಿಳಿಸಿದ್ದಾರೆ.