ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಡಿ.7ರಂದು ನಡೆಯಲಿರುವ ವರ್ಷಾವಧಿ ಉತ್ಸವ “ಷಷ್ಠಿ ಮಹೋತ್ಸವಕ್ಕೆ” ಡಿ.5ರಂದು ಹೊರೆಕಾಣಿಕೆ ಸಮರ್ಪಣೆ ನೆರವೇರಿತು.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಹೊರಟ ಮೆರವಣಿಗೆಗೆ ದೇವಸ್ಥಾನದ ವ್ಯವಸ್ಥಾಪಕ ಹರೀಶ್ ಶೆಟ್ಟಿ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಮೆರವಣಿಗೆಯು ಮುಖ್ಯರಸ್ತೆ ದರ್ಬೆ ಮೂಲಕ ದೇವಸ್ಥಾನಕ್ಕೆ ಸಾಗಿ ಬಂದಿದೆ.
ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ವ್ಯವಸ್ಥಾಪನಾ ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಆಡಳಿತಾಧಿಕಾರಿ ಸುಲೋಚನ ಪಿ.ಕೆ., ಗಣೇಶ್ ಗೌಡ ನೈತ್ತಾಡಿ, ಲೋಕೇಶ್ ಗೌಡ ಮುಕ್ರಂಪಾಡಿ, ಸೂರಪ್ಪ ಗೌಡ, ಸೂರ್ಯಕುಮಾರ್, ಧರ್ಣಪ್ಪ ಗೌಡ, ದಯಾನಂದ ಅತ್ತಾಳ, ಯೋಗೀಶ್ ಮರೀಲ್, ರವಿರಾಜ್ ಕೆಮ್ಮಿಂಜೆ, ಮನೋಜ್ ಕೆಮ್ಮಿಂಜೆ, ರವಿ ಬಾಳಿಗ ಕೆಮ್ಮಿಂಜೆ, ಕಿರಣ್ ಕೆಮ್ಮಿಂಜೆ, ದೀಕ್ಷಿತ್ ಬೆದ್ರಾಳ, ರಕ್ಷಿತ್ ಬೆದ್ರಾಳ, ರಕ್ಷಿತ್ ಬೆದ್ರಾಳ, ಮಹೇಶ್ ಹಾಗೂ ದಿನೇಶ್ ಕೆಮ್ಮಿಂಜೆ ಸೇರಿದಂತೆ ಹಲವು ಮಂದಿ ಭಕ್ತಾಧಿಗಳು ಭಾಗವಹಿಸಿದ್ದರು.