ನಿಡ್ಪಳ್ಳಿ; ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀಯವರ ಅಧ್ಯಕ್ಷತೆಯಲ್ಲಿ ಡಿ.4 ರಂದು ನಡೆಯಿತು.
ಫಲಾನುಭವಿಗಳು ಕುಡಿಯುವ ನೀರಿನ ಬಿಲ್ಲು ಕಟ್ಟದೇ ಇರುವುದರಿಂದ ಗ್ರಾಮ ಅಭಿವೃದ್ಧಿಗೆ ತೊಡಕಾಗಿದ್ದು ಕಳೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕೈಗೊಂಡ ನಿರ್ಣಯದ ಬಗ್ಗೆ ಚರ್ಚೆ ನಡೆಯಿತು. ನೀರಿನ ಬಿಲ್ಲು ಸಂಗ್ರಹವಾಗದೆ ಇದ್ದರೆ ಗ್ರಾಮದ ಅಭಿವೃದ್ಧಿ ಸಾಧ್ಯವಿಲ್ಲ.ಬಿಲ್ಲು ಪ್ರತಿ ತಿಂಗಳು ಪಾವತಿಸುವಂತೆ ಫಲಾನುಭವಿಗಳನ್ನು ಮನವೊಲಿಸುವ ಕೆಲಸ ಪರಿಣಾಮಕಾರಿಯಾಗಿ ನಡೆಯಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಹದಿನೈದನೆಯ ಹಣಕಾಸು ಯೋಜನೆಯಲ್ಲಿ ಪ್ರತಿ ವಾರ್ಡ್ ನ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಇಲಾಖೆಯ ಸುತ್ತೋಲೆಗಳ ಪರಿಶೀಲನೆ ಮತ್ತು ಸಾರ್ವಜನಿಕ ಅರ್ಜಿಗಳ ವಿಲೇವಾರಿ ಮಾಡಲಾಯಿತು.
ಉಪಾಧ್ಯಕ್ಷ ಮಹೇಶ್.ಕೆ, ಸದಸ್ಯರಾದ ನವೀನ್ ರೈ, ಗಂಗಾಧರ ಗೌಡ, ಮೊಯಿದು ಕುಂಞ, ಮಹಾಲಿಂಗ ನಾಯ್ಕ,ಸುಮಲತಾ, ಲಲಿತಾ ಚಿದಾನಂದ, ಲಲಿತಾ,ಚಂದ್ರಶೇಖರ ರೈ, ಪಾರ್ವತಿ.ಎಂ,ಪವಿತ್ರ.ಡಿ, ಬೇಬಿ,ಉಮಾವತಿ, ಪ್ರಕಾಶ್ ರೈ, ಉಪಸ್ಥಿತರಿದ್ದರು.
ಪಿಡಿಒ ಸೌಮ್ಯ ಸ್ವಾಗತಿಸಿದರು. ಕಾರ್ಯದರ್ಶಿ ಬಾಬು ನಾಯ್ಕ ವಂದಿಸಿದರು.ಸಿಬ್ಬಂದಿಗಳಾದ ಸಂದೀಪ್, ಕವಿತಾ, ಸವಿತಾ, ಚಂದ್ರಾವತಿ ಸಹಕರಿಸಿದರು.