ಪುತ್ತೂರು: ಪುತ್ತೂರು ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ನಾಗದೇವರ ಸನ್ನಿಧಿಯಲ್ಲಿ ಅನ್ಯಮತೀಯ ವ್ಯಕ್ತಿಯೋರ್ವ ಹಾನಿಯುಂಟುಮಾಡಲು ಯತ್ನಿಸಿರುವುದನ್ನು ಬಿಜೆಪಿ ಖಂಡಿಸುತ್ತದೆ ಮತ್ತು ಆರೋಪಿಗೆ ತಕ್ಕ ಶಿಕ್ಷೆ ವಿಧಿಸುವಂತೆ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್ ಆಗ್ರಹಿಸಿದ್ದಾರೆ.
ಪುತ್ತೂರು ಬಿಜೆಪಿ ಕಚೇರಿಯಲ್ಲಿ ಅವರು ಮಾಧ್ಯಮದ ಜೊತೆ ಮಾತನಾಡಿ ಹಿಂದೂ ಧಾರ್ಮಿಕ ಕ್ಷೇತ್ರಕ್ಕೆ ವಿರೋಧಿ ಶಕ್ತಿಗಳು ವಿನಾಕಾರಣ ದಾಳಿ ನಡೆಸಿ ಹಾನಿ ಮಾಡುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಸರಕಾರ ಈ ಕುರಿತು ಒಂದೇ ಒಂದು ಮಾತನ್ನು ಆಡದೆ ಅಲ್ಪಸಂಖ್ಯಾತ ಅನ್ಯಮತೀಯರ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಪುತ್ತೂರಿನ ಶಾಸಕರು ಹಿಂದೂ ಧಾರ್ಮಿಕ ಸ್ಳಳಗಳಿಗೆ ಭೇಟಿ ನೀಡಿ ನಾನೊಬ್ಬ ಹಿಂದೂ, ಹಿಂದೂ ಧರ್ಮದ ಆರಾಧಕ ಎಂದು ಹೇಳುತ್ತಾರೆ ಹೊರತು ಹಿಂದೂ ಆರಾಧನ ಸ್ಥಳಗಳಿಗೆ ದಾಳಿಯಾದಾಗ ಒಂದೇ ಒಂದು ಖಂಡನೆಯನ್ನು ವ್ಯಕ್ತಪಡಿಸುತ್ತಿಲ್ಲ. ಇಂತಹ ಮನಸ್ಥಿತಿಯ ಶಾಸಕರಿಂದ ಅನ್ಯಮತೀಯರು ಬಾಲ ಬಿಚ್ಚುತ್ತಿದ್ದಾರೆ. ಸರಕಾರ ಹಾಗೂ ಪೊಲೀಸ್ ಇಲಾಖೆ ಆರೋಪಿಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.