ಪುತ್ತೂರು: ಆಳ್ವಾಸ್ ಸೆಂಟ್ರಲ್ ಸ್ಕೂಲ್ ಮೂಡಬಿದ್ರೆಯಲ್ಲಿ ಇದೇ ಡಿ.5ರಂದು ನಡೆದ ಪ್ರಾಂತ ಮಟ್ಟದ INSEF ರೀಜನಲ್ ಸೈನ್ಸ್ ಫೇರ್ ನಲ್ಲಿ ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದಾರೆ.
7ನೇ ತರಗತಿಯ ವಿದ್ಯಾರ್ಥಿನಿ ಮೇಧಾ ಭಟ್ (ಕೃಷ್ಣಮೂರ್ತಿ ಪಿ.ಎಸ್. ಮತ್ತು ಶ್ವೇತಾ ಸರಸ್ವತಿ ದಂಪತಿ ಪುತ್ರಿ)ಇವರು ಬೆಳ್ಳಿ ಪದಕ, 9ನೇ ತರಗತಿಯ ವಿದ್ಯಾರ್ಥಿನಿ ಕೃತಿ ರೈ (ಭಾಸ್ಕರ ರೈ ಮತ್ತು ಶಾರದಾ ದಂಪತಿ ಪುತ್ರಿ ) ಇವರು ಕಂಚಿನ ಪದಕ ಹಾಗೂ 10ನೇ ತರಗತಿಯ ವಿದ್ಯಾರ್ಥಿ ರೂಪೇಶ್ ಕೆ.ಆರ್. ( ರಾಜೇ ಗೌಡ ಕೆ. ಎನ್ ಮತ್ತು ಗಾಯತ್ರಿ ದಂಪತಿ ಪುತ್ರ) ಇವರು ಗೌರವ ಪುರಸ್ಕಾರವನ್ನು ಪಡೆದಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ. ಇವರಿಗೆ ಶಾಲಾ ವಿಜ್ಞಾನ ಶಿಕ್ಷಕಿಯರಾದ ಶ್ರೀದೇವಿ ಹೆಗ್ಡೆ ಮತ್ತು ಆರ್ ರಶ್ಮಿತಾ ಇವರು ತರಬೇತಿಯನ್ನು ನೀಡಿರುತ್ತಾರೆ.