ಶ್ರೀ ರಾಮಕುಂಜೇಶ್ವರ ಪ.ಪೂ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ‘ಶ್ರೀಮದ್ಭಗವದ್ಗೀತೆ ಮತ್ತು ಯುವ ಮನಸ್ಸು’- ಉಪನ್ಯಾಸ

0

ಪುತ್ತೂರು: ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ‘ಶ್ರೀಮದ್ಭಗವದ್ಗೀತೆ ಮತ್ತು ಯುವ ಮನಸ್ಸು’ ಎಂಬ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಆಳ್ವಾಸ್ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ. ವಿನಾಯಕ ಭಟ್ ಗಾಳಿಮನೆ ತಮ್ಮ ಉಪನ್ಯಾಸದಲ್ಲಿ “ಶ್ರೀಮದ್ಭಗವದ್ಗೀತೆಯು ಎಲ್ಲಾ ವಯಸ್ಸಿನವರಿಗೆ ಅಗತ್ಯ ಮಾರ್ಗದರ್ಶನವನ್ನು ಮಾಡುತ್ತದೆ. ಯಾರು ಬೇಕಾದರೂ ಓದಬಹುದಾದ ಮತ್ತು ಇದರ ತತ್ವಗಳನ್ನು ಅಳವಡಿಸಿಕೊಳ್ಳಬಹುದಾದ ಅಪ್ರತಿಮ ವ್ಯಕ್ತಿತ್ವ ವಿಕಸನದ ಉಪದೇಶವೇ ಗೀತೆ.
ವಿದ್ಯಾರ್ಥಿಗಳು ವಿವಿಧ ಚಂಚಲ ವಿಷಯಗಳಿಗೆ ಆಕರ್ಷಿತರಾಗದೇ, ಏಕಾಗ್ರತೆಯನ್ನು ಸಾಧಿಸಲು, ಸಮಚಿತ್ತವನ್ನು ಹೊಂದಲು, ಸೋತಾಗ ಮೇಲೇಳಲು ಗೀತೆಯಲ್ಲಿನ ಶ್ರೀ ಕೃಷ್ಣ-ಅರ್ಜುನರ ಸಂಭಾಷಣೆಯು ದಾರಿದೀಪವಾಗುತ್ತದೆ. ಇಂಥಹ ಶ್ರೀಮದ್ಭಗವದ್ಗೀತೆಯ ಅಧ್ಯಯನವನ್ನು ಎಲ್ಲರೂ ಮಾಡಿ ಜೀವನದಲ್ಲಿ ಉನ್ನತ ಸಾಧನೆಯನ್ನು ಮಾಡಿರಿ” ಎಂದು ಹೇಳಿದರು.

ವಿದ್ಯಾರ್ಥಿನಿಯರಾದ ಹಂಸಿನಿ ಮತ್ತು ಬಳಗ ಪ್ರಾರ್ಥಿಸಿದರು. ಉಪನ್ಯಾಸಕ ಚೇತನ್ ಎಂ ಪರಿಚಯಿಸಿದರು. ಹಿರಿಯ ಉಪನ್ಯಾಸಕ ವಸಂತ ಕುಮಾರ್ ಡಿ ಸ್ವಾಗತಿಸಿದರು.ಪ್ರೌಢಶಾಲೆಯ ಮುಖ್ಯಶಿಕ್ಷಕ ಸತೀಶ್ ಭಟ್ ಬಿಳಿನೆಲೆ ವಂದಿಸಿದರು.

LEAVE A REPLY

Please enter your comment!
Please enter your name here