ಪುತ್ತೂರು: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಗಳ ಕಛೇರಿ ಪುತ್ತೂರು ಇದರ ಆಶ್ರಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಕೆಮ್ಮಾಯಿ ಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ ಲಭಿಸಿದೆ .
ತಾಲೂಕು ಮಟ್ಟದಲ್ಲಿ ಫಾತಿಮಾ ಅಭಿನಯ ಗೀತೆಯಲ್ಲಿ ಪ್ರಥಮ ಹಾಗೂ ಪ್ರಾರ್ಥನಾ ದೇಶಭಕ್ತಿ ಗೀತೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
ಕೆಮ್ಮಾಯಿ ಶಾಲೆ ಕೋಡಿಂಬಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ ಹಾಗೂ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿಯೂ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಹಿರಿಯರ ವಿಭಾಗದಲ್ಲಿ ಯುನೀಕ್ಷಾ, ಕನ್ನಡ ಕಂಠ ಪಾಠದಲ್ಲಿ ಪ್ರಥಮ ಇಂಗ್ಲಿಷ್ ಕಂಠ ಪಾಠ ಪ್ರಥಮ ಪ್ರಜ್ಞಾ ಕಥೆ ಹೇಳುವುದರಲ್ಲಿ ಪ್ರಥಮ ವಫಾ ಹಿಂದಿ ಕಂಠಪಾಠ ತೃತೀಯ, ರಾಝೀಕ್ ಅರೇಬಿಕ್ ಪಟ್ಟಣದಲ್ಲಿ ತೃತೀಯ, ಭವಿಷ್ ದೇಶಭಕ್ತಿ ಗೀತೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಕಿರಿಯರ ವಿಭಾಗದಲ್ಲಿ ನವ್ಯಶ್ರೀ ಕನ್ನಡ ಕಂಠಪಾಠ ಪ್ರಥಮ ಮನ್ವಿತ ಛಧ್ಮವೇಷ ಪ್ರಥಮ ಫಾತಿಮಾ ಕಥೆ ಹೇಳುವುದು ಮತ್ತು ಅಭಿನಯ ಗೀತೆ ಪ್ರಥಮ, ಪ್ರಾರ್ಥನಾ ದೇಶಭಕ್ತಿ ಗೀತೆ ಪ್ರಥಮ ,ಭಕ್ತಿ ಗೀತೆ ದ್ವಿತೀಯ , ವೀಕ್ಷಾ ಸಂಸ್ಕೃತ ಪಠಣ ಪ್ರಥಮ, ಶಹನಾಸ್ ಇಂಗ್ಲಿಷ್ ಕಂಠಪಾಠ ಪ್ರಥಮ ಅರೇಬಿಕ್ ನಲ್ಲಿ ದ್ವಿತೀಯ ರಿಥ್ವಿಕ್ ಕ್ಲೇ ಮಾಡಲಿಂಗ್ ದ ತೃತೀಯ ಸ್ಥಾನ ಗಳನ್ನು ಪಡೆದು ಹಿರಿಯ ಮತ್ತು ಕಿರಿಯ ವಿಭಾಗಗಳಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ ಮಕ್ಕಳ ಪೋಷಕರು ಮತ್ತು ಎಸ್ ಡಿಎಂಸಿ ಅವರು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮತ್ತು ಶಾಲಾ ಶಿಕ್ಷಕರ ಶ್ರಮಕ್ಕೆ ಅಭಿನಂದನೆ ಸಲ್ಲಿಸಿರುತ್ತಾರೆ.
ಪ್ರಸ್ತುತ ವರ್ಷ ಶಾಲಾ ಶಿಕ್ಷಕಿ ಶ್ರುತಿ ಮತ್ತು ನಾಗವೇಣಿಯವರ ನೇತೃತ್ವದಲ್ಲಿ ಶಾಲಾ ಮುಖ್ಯ ಗುರುಗಳಾದ ಮರಿಯಮ್ಮ ಪಿ.ಎಸ್ ಇವರ ಮಾರ್ಗದರ್ಶನದಲ್ಲಿ ಶಾಲಾ ಶಿಕ್ಷಕರು ತರಬೇತಿ ನೀಡಿದರು.