ಪುತ್ತೂರು: ಶಾಲಾ ವಿದ್ಯಾರ್ಥಿಗಳಲ್ಲಿ ಹೊಸ ಆವಿಷ್ಕಾರಗಳನ್ನು ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಬೆಳಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ INSEF Science Society of India ನಡೆಸುವ INSEF -Regional Science Fair ಆಳ್ವಾಸ್ ಸಿ.ಬಿ.ಎಸ್.ಇ ಶಾಲೆಯಲ್ಲಿ ಡಿ.5ರಂದು ನಡೆಯಿತು.
ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯರಾದ ಸುಪ್ರಜಾ.ರಾವ್ (ಪ್ರಶಾಂತ್ರಾವ್ ಮತ್ತು ಸುಮನ.ಕೆ ದಂಪತಿಗಳ ಪುತ್ರಿ)-Narikela – The Healing ಎಂಬ ವಿಜ್ಞಾನ ಮಾದರಿ ಹಾಗೂ 8ನೇ ತರಗತಿಯ ವಿದ್ಯಾರ್ಥಿ ಸಮೃಧ್ ಆರ್ ಶೆಟ್ಟಿ (ರಾಮಚಂದ್ರ ಕೆ ಮತ್ತು ಶೋಭಾ ದಂಪತಿಗಳ ಪುತ್ರ) – ’Avishkar’ the land mine detection Robot ಎಂಬ ವಿಜ್ಞಾನ ಮಾದರಿಗಳು ಚಿನ್ನದ ಪದಕವನ್ನು ಗಳಿಸುವುದರ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
9ನೇ ತರಗತಿಯ ವಿದ್ಯಾರ್ಥಿಗಳಾದ ಶಮನ್.ಎನ್ (ನಿತ್ಯಾನಂದ.ಕೆ ಹಾಗೂ ಸಂಧ್ಯಾ.ಕೆ ದಂಪತಿಗಳ ಪುತ್ರ) – Smart Waste Monitoring System ಎಂಬ ವಿಜ್ಞಾನ ಮಾದರಿ, ಪ್ರಮಥ್ ಶಾನ್ಬಾಗ್(ಪ್ರಸಾದ್ ಶಾನ್ಬಾಗ್ ಮತ್ತು ಗೀತಾ ಶಾನ್ಬಾಗ್ ದಂಪತಿಗಳ ಪುತ್ರ), Road Accident Prevention system ಎಂಬ ವಿಜ್ಞಾನ ಮಾದರಿ ಹಾಗೂ 8ನೇ ತರಗತಿಯ ವಿದ್ಯಾರ್ಥಿ ಕ್ಷಮೇತ್ ಜೈನ್ (ಹನೀಶ್ ಜೈನ್ ಮತ್ತು ಶುತಿ ಜೈನ್ ದಂಪತಿಗಳ ಪುತ್ರ) – Solar Tracking system ಎಂಬವಿಜ್ಞಾನ ಮಾದರಿಗಳು ಕಂಚಿನ ಪದಕವನ್ನು ಗಳಿಸಿವೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.