ಪುತ್ತೂರು:ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಡಿ.7ರಂದು ನಡೆದ ಷಷ್ಠಿ ಮಹೋತ್ಸವದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೈತ್ತಾಡಿ ಕೀರ್ತಿ ಸ್ವ-ಸಹಾಯ ಸಂಘದಿಂದ 21ನೇ ವರ್ಷದ ಮಜ್ಜಿಗೆ ವಿತರಿಸಿದರು.
ಮಜ್ಜಿಗೆ ವಿತರಣೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಬಳ್ಳಕ್ಕುರಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಉತ್ಸವ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಗಣೇಶ್ ಗೌಡ ನೈತ್ತಾಡಿ, ದೇವಪ್ಪ ಗೌಡ ನೈತ್ತಾಡಿ, ಸ್ವ-ಸಹಾಯ ಸಂಘದ ಯಮುನಾ, ಸುಜಾತ, ಉಷಾ, ರೂಪ, ಬೇಬಿರೇಖಾ, ಶಕುಂತಳಾ, ವೀಣಾ ಹಾಗೂ ಗೀತಾ ಮೊದಲಾದವರು ಉಪಸ್ಥಿತರಿದ್ದರು.