“ನಾವು ಯೋಚಿಸಿದಂತೆ ನಮ್ಮ ನಡತೆ ಇರುತ್ತದೆ”: ಅರವಿಂದ ಚೊಕ್ಕಾಡಿ
ಪುತ್ತೂರು: ಆಕಾಂಕ್ಷಾ ಚಾರಿಟಬಲ್ ಟ್ರಸ್ಟ್ ನ ಸಾರಥ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಮತ್ತು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದೊಂದಿಗೆ ‘ಶ್ರೀರಾಮ ಸಭಾಭವನ’ದಲ್ಲಿ ‘ವಿದ್ಯಾ ಸ್ಫೂರ್ತಿ-2024’ಯನ್ನು ಉದ್ಘಾಟಿಸಲಾಯಿತು.
ಮುಖ್ಯ ಅತಿಥಿ ಅರವಿಂದ ಚೊಕ್ಕಾಡಿ ಮಾತನಾಡಿ “ನಾವು ಯೋಚಿಸಿದಂತೆ ನಮ್ಮ ನಡತೆ ಇರುತ್ತದೆ, ಎಷ್ಟು ಸಂಸ್ಕಾರ ಎನ್ನುವುದು ಯೋಚನೆ ಮತ್ತು ಯೋಜನೆಗಳಲ್ಲಿ ಕರ್ಯಗತವಾಗಬೇಕು. ವಿದ್ಯಾ ಸ್ಫೂರ್ತಿಯಂತಹ ಕಾರ್ಯಕ್ರಮ ಮಕ್ಕಳ ಬಹುವಿಧ ಚಿಂತನೆಯಲ್ಲಿ ಸಹಕರಿಸುತ್ತದೆ” ಎಂದು ಹೇಳಿದರು.
ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಂಚಾಲಕ ಟಿ ಎಸ್ ಸುಬ್ರಹ್ಮಣ್ಯ ಭಟ್ ಗೌರವ ಅತಿಥಿಗಳಾಗಿಯೂ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಕಾಂತ್ ರಾವ್ ಎಸ್ ಕೆ ಹಾಗು ಆಕಾಂಕ್ಷಾ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಡಾ. ಶ್ರೀಶ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾ ಸ್ಫೂರ್ತಿ 2024ರ ಭಾಗವಾಗಿ ರಸಪ್ರಶ್ನೆ, ವಿಜ್ಞಾನ ರಂಗೋಲಿ, ಸ್ಪೆಲ್ಲ್ ಬೀ, ಆಶುಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಗಳಿದ್ದವು. ವಿವಿಧ ಶಾಲೆಗಳ ಸುಮಾರು ನೂರಕ್ಕೂ ಹೆಚ್ಚು ಜನ ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಶಾಲಾ ಶಿಕ್ಷಕರಿಗಾಗಿ ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ, ಬಹುಮಾನಿತರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.