ಕಡಬ: ಕೊಯಿಲ ಗ್ರಾಮದ ಗುಲ್ಗೋಡಿ ನಿವಾಸಿ ಗಂಗಯ್ಯ ಪೂಜಾರಿ (73ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಡಿ.7ರಂದು ನಿಧನರಾದರು.
ಗಂಗಯ್ಯ ಪೂಜಾರಿ ಅವರು ದೈವಗಳ ಮಧ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿಯರಾದ ಸುಂದರಿ, ಕಮಲ, ಪುತ್ರಿಯರಾದ ಪಾರ್ವತಿ, ಡೀಲಾಕ್ಷಿ, ಪುತ್ರ ಯಾದವ, ಅಳಿಯಂದಿರು, ಸೊಸೆ ಹಾಗು ಮೊಮ್ಮಕ್ಕಳನ್ನು ಅಗಲಿದ್ದಾರೆ.