ಆಲಂಕಾರು: ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ರಥಬೀದಿಯಲ್ಲಿ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿಯಿಂದ ನಾಳೆ
ಡಿ.10 ರಂದು ಮಂಗಳವಾರ ಸಂಜೆ 6:00 ರಿಂದ ಶರವೂರು ಶ್ರೀ ದುರ್ಗಾಪರಮೇಶ್ವರಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.
ಸಂಜೆ 4:00 ರಿಂದ ಪಾವಂಜೆ ಮೇಳದ ದೇವರನ್ನು ಆಲಂಕಾರಿನಿಂದ ಪೂರ್ಣಕುಂಭ ಸ್ವಾಗತ,ಚೆಂಡೆ,ಭಜನೆ,ಕೋಲಾಟ ಮೆರವಣಿಗೆಯೊಂದಿಗೆ ಸ್ವಾಗತಿಸುವುದು ನಂತರ 6:00 ರಿಂದ ಯಕ್ಷಗಾನ ಪ್ರಾರಂಭ, ರಾತ್ರಿ 7:15 ರಿಂದ ಸಭಾಕಾರ್ಯಕ್ರಮ ನಡೆಯಲಿದೆ. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಮಲ್ಲಿಕಾ ಪಕ್ಕಳ , ಕೇಶವ ಅಮೈ ಕಲಾಯಿಗುತ್ತು,ಎಸ್.ಆರ್.ಕೆ ಲ್ಯಾಡರ್ ಪುತ್ತೂರು, ಪುತ್ತೂರು ಅಕ್ಷಯ ಕಾಲೇಜ್ ನ ಸಂಚಾಲಕರಾದ ಜಯಂತ ನಡುಬೈಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಸಭಾಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಪೌಂಡೇಶನ್ (ರಿ) ಸ್ಥಾಪಕಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಯವರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ರಾವ್ ನಗ್ರಿ ದಂಪತಿ ಹಾಗೂ ಮನೆಯವರು ಕುಂಜವನ ನಗ್ರಿಯವರ ಸೇವಾರ್ಥವಾಗಿ ಯಕ್ಷಗಾನ ಬಯಲಾಟ ನಡೆಯಲಿದೆ. ಕಲಾಭಿಮಾನಿಗಳು ಅಗಮಿಸಿ ಯಕ್ಷಗಾನ ಬಯಲಾಟ ಚಂದಗಾಣಿಸಿ ಕಲಾಮಾತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ ಮತ್ತು ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಹೇಮಂತ್ ರೈ ಮನವಳಿಕೆ ಗುತ್ತು ಮತ್ತು ಸದಸ್ಯರು, ಪ್ರವಿತ್ರಪಾಣಿ ಹರೀಶ ಆಚಾರ್ಯ ನಗ್ರಿಗುತ್ತು, ದುರ್ಗಾಂಬಾ ಕಲಾ ಸಂಗಮ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ನೈಮಿಷ, ಶರವೂರು ಶ್ರೀ ಆದಿಶಕ್ತಿ ಭಜನಾ ಮಂಡಳಿಯ ಅಧ್ಯಕ್ಷರಾದ ಲಿಂಗಪ್ಪ ಮಡಿವಾಳ, ಸ್ವಯಂ ಸೇವಾ ಸಮಿತಿಯ ಅಧ್ಯಕ್ಷರಾದ ಚೆನ್ನಪ್ಪ ಗೌಡ ಶರವೂರು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.