puttur:ಮೂಡಬಿದ್ರೆಯ ಆಳ್ವಾಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಸೈನ್ಸ್ ಫೇರ್ ಕಾರ್ಯಕ್ರಮ ಡಿ.5ರಂದು ನಡೆಯಿತು.ಇದರಲ್ಲಿ ಸುದಾನ ಶಾಲೆಯಿಂದ ಆಯ್ಕೆಯಾಗಿ ಭಾಗವಹಿಸಿದ್ದ ಎಲ್ಲಾ ಐದು ವಿದ್ಯಾರ್ಥಿಗಳು ಬಹುಮಾನ ಪಡೆದಿರುತ್ತಾರೆ.
ಏಳನೇ ತರಗತಿಯ ಆದಿತ್ಯ ಕೆ. ಅವರ ಪ್ರಾಜೆಕ್ಟ್ ಆಕ್ಸಿಡೆಂಟ್ ಪ್ರೆವೆನ್ಷನ್ ಸಿಸ್ಟಮ್ ಯೂಸಿಂಗ್ ಸೆನ್ಸರ್ ಗೆ ಬೆಳ್ಳಿಯ ಪದಕ, ಎಂಟನೇ ತರಗತಿಯ ತುಷಾರ್ ಆನಂದ್ ಆರ್ ರಾವ್ ಪ್ರೊಜೆಕ್ಟ್: ಪೊಲ್ಯುಷನ್ ಟು ಇಂಕ್ ಕನ್‌ವರ್ಟರ್ ಗೆ ಕಂಚಿನ ಪದಕ, ಏಳನೇ ತರಗತಿಯ ಹೃತ್ವಿಕಾ ಆರ್ ನಾಯ್ಕ್ ಅವರ ಪ್ರೊಜೆಕ್ಟ್: ಪ್ಯಾಸೆಂಜರ್ ಕಂಟ್ರೋಲ್ಡ್ ಸ್ಪೀಡ್ ರಿಜಿಸ್ಟರ್ ಇನ್ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಗೆ ಗೌರವಾನ್ವಿತ ಪ್ರಶಸ್ತಿ. 9ನೇ ತರಗತಿಯ ಅದ್ವಿಜ್ ಸಜೇಶ್ ಅವರ ಪ್ರೊಜೆಕ್ಟ್:AI ಟೀಸ್ಡ್ ಸ್ಕೂಲ್ ಮೇನೇಜ್‌ಮೆಂಟ್ ಆಫ್ ಸ್ಕೂಲ್ ಹಬ್ ಗೆ ಗೌರವಾನ್ವಿತ ಪ್ರಶಸ್ತಿ ಹಾಗೂ ಒಂಬತ್ತನೇ ತರಗತಿಯ ಮಿಥುನ್ ಪಿ ಪಿ ಅವರ ಪ್ರಾಜೆಕ್ಟ್ ಇನ್ನೋವೇಶನ್ ಇನ್ ಬರ್ಗರ್ ಡಿಟೆಕ್ಷನ್ ತ್ರೂ ಮೋಶನ್ ಸೆನ್ಸಿಂಗ್ ಗೆ ಗೌರವಾನ್ವಿತ ಪ್ರಶಸ್ತಿ ಲಭಿಸಿದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ತಿಳಿಸಿದ್ದಾರೆ.
ಇವರಿಗೆ ವಿಜ್ಞಾನ ಶಿಕ್ಷಕಿಯರಾದ ಶ್ಯಾಮಲ ಡಿ ಬಂಗೇರ ಮತ್ತು ನಿವೇದಿತಾ ಭಂಡಾರಿ ಅವರು ಮಾರ್ಗದರ್ಶನ ನೀಡಿರುತ್ತಾರೆ ಶಾಲಾ ಮುಖ್ಯೋಪಾಧ್ಯಾಯನಿ ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.