ಕಡಬ:-ಇನ್ಟಿಟ್ಯೂಟ್ ಆಫ್ ಕರಾಟೆ ಮತ್ತು ಅಲೈಡ್ ಆರ್ಟ್ಸ್ ,ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಆ.ಮಾಧ್ಯಮ ಶಾಲೆಯಲ್ಲಿ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟ ನಡೆಯಿತು.
ಕ್ರೀಡೆಯಲ್ಲಿ ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ಕನ್ನಡ ವಿಭಾಗದ ಯದ್ವಿತ್ 20-25ಕೆ.ಜಿ ವಿಭಾಗದ ಯೆಲ್ಲೋ ಬೆಲ್ಟ್ ನಲ್ಲಿ ತೃತೀಯ ಮತ್ತು ಯೆಲ್ಲೋ ಬೆಲ್ಟ್ ಕಟ ವಿಭಾಗದಲ್ಲಿ ದ್ವಿತೀಯ,4ನೇ ತರಗತಿಯ ಹರ್ಷಿತ್ ಯೆಲ್ಲೋಬೆಲ್ಟ್ ಕಟ ವಿಭಾಗದಲ್ಲಿ ತೃತೀಯ ಮತ್ತು ಕುಮಿಟೆಯಲ್ಲಿ ದ್ವಿತೀಯ,3ನೇ ತರಗತಿ ಮೋಹಿತ್ ಯೆಲ್ಲೋ ಬೆಲ್ಟ್ ಕಟ ವಿಭಾಗದಲ್ಲಿ ದ್ವಿತೀಯ ಮತ್ತು ಕುಮಿಟೆಯಲ್ಲಿ ತೃತೀಯ,4ನೇ ತರಗತಿ ಅಶ್ವಿತ್ ವೈಟ್ ಬೆಲ್ಟ್ ಕುಮಿಟೆಯಲ್ಲಿ ತೃತೀಯ,4ನೇ ತರಗತಿ ಲತೇಶ್ ಯೆಲ್ಲೋ ಬೆಲ್ಟ್ ಕಟ ವಿಭಾಗದಲ್ಲಿ ದ್ವಿತೀಯ, 5ನೇ ತರಗತಿ ಅನ್ವಿತ್ ಯೆಲ್ಲೋ ಬೆಲ್ಟ್ ಕಟ ವಿಭಾಗದಲ್ಲಿ ದ್ವಿತೀಯ, ಸ್ಥಾನಗಳನ್ನು ಪಡೆದಿರುತ್ತಾರೆ.ಇವರಿಗೆ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲಾ ಆಶ್ರಯದಲ್ಲಿ ಕರಾಟೆ ತರಬೇತುದಾರ ಚಂದ್ರಶೇಖರ ಕನಕಮಜಲು ತರಬೇತಿ ನೀಡಿರುತ್ತಾರೆ.