ಆರ್ಯಾಪು: ಬೂಡಿಯಾರು ಹೊಸಮನೆ ಶ್ರೀಚಕ್ರ ರಾಜರಾಜೇಶ್ವರಿ ದೇವಸ್ಥಾನದ ಜಾತ್ರೆಗೆ ಗೊನೆಮುಹೂರ್ತ

0

ಪುತ್ತೂರು: ಆರ್ಯಾಪು ಗ್ರಾಮದ ಬೂಡಿಯಾರು ಹೊಸಮನೆ ಶ್ರೀಚಕ್ರ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಡಿ.14 ಮತ್ತು 15ರಂದು ನಡೆಯಲಿರುವ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವದ ಪ್ರಯುಕ್ತ ಡಿ.7ರಂದು ಗೊನೆ ಮುಹೂರ್ತ ನೆರವೇರಿತು. ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆ ನೆರವೇರಿಸಿ ಬಳಿಕ ಗೋಪಾಲ ಪೂಜಾರಿರವರ ತೋಟದಿಂದ ಕ್ಷೇತ್ರದ ತಂತ್ರಿ ಪ್ರೀತಮ್ ಪುತ್ತೂರಾಯರವರ ನೇತೃತ್ವದಲ್ಲಿ ಅರ್ಚಕರು ಪೂಜಾ ವಿಧಿ ವಿಧಾನ ನೆರವೇರಿಸಿ ಗೊನೆ ಕಡಿಯಲಾಯಿತು. ದೇವಸ್ಥಾನದ ಅಧ್ಯಕ್ಷ ಗಂಗಾಧರ ಅಮೀನ್ ಹೊಸಮನೆ, ಕಾರ್ಯದರ್ಶಿಗಳಾದ ಜಯಂತ್ ಶೆಟ್ಟಿ ಕಂಬಳದಡ್ಡ, ಶೇಷಪ್ಪ ಗೌಡ, ಕೃಷ್ಣಪ್ಪಗೌಡ, ಆನಂದ ಅಮೀನ್ ಹೊಸಮನೆ, ಅಶೋಕ್ ಗೌಡ, ಬೇಕಲ್ ವಿಲ್ಲಾ, ನವೀನ್ ರೈ ಮಜಲುಮನೆ, ತಾರನಾಥ್ ಮೆರ್ಲ, ಜಯರಾಮ್ ಆಚಾರ್ಯ, ಜಿನ್ನಪ್ಪ ಮಡಿವಾಳ, ಗೋಪಾಲ್ ಪೂಜಾರಿ ಕಂಬಳದಡ್ಡ, ಸುಗುಣ, ನಯನ ಪ್ರದೀಪ್ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here