ಪುತ್ತೂರು: ಉಪ್ಪಿನಂಗಡಿ ಹಳೆ ಬಸ್ಸು ನಿಲ್ದಾಣದ ಬಳಿ ಕಾರ್ಯಾಚರಿಸುತ್ತಿರುವ ರೆಡಿಮೇಡ್ ಗಾರ್ಮೆಂಟ್ಸ್, ಸಾರಿ, ಮಕ್ಕಳ ಡ್ರೆಸ್, ಲೇಡೀಸ್/ಜಂಟ್ಸ್ ಸಿದ್ಧ ಉಡುಪುಗಳು, ಗೃಹೋಪಯೋಗಿ ಉತ್ಪನ್ನಗಳ ಮಳಿಗೆ ಸಿಟಿ ಸೆಂಟರ್ ಕಲೆಕ್ಷನ್‌ನ 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕೂಪನ್ ಬಿಡುಗಡೆ ಸಮಾರಂಭವು ಡಿ.9 ರಂದು ಜರಗಿತು.
ಗ್ರಾಹಕರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುವುದು ಮಳಿಗೆಯ ಅಭಿವೃದ್ಧಿಗೆ ಸಾಕ್ಷಿ-ಯು.ರಾಮ:
ಉಪ್ಪಿನಂಗಡಿಯ ಅಡಿಕೆ ಉದ್ಯಮಿ ಯು.ರಾಮರವರು ಕೂಪನ್ ಬಿಡುಗಡೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿ, ಉಪ್ಪಿನಂಗಡಿ ಪರಿಸರದಲ್ಲಿ ಎಂ.ಜಿ ಬ್ರದರ್ಸ್ ಉದ್ಯಮದಲ್ಲಿ ಹೊಸ ಭಾಷ್ಯವನ್ನೇ ಬರೆದಿದ್ದಾರೆ. ಗ್ರಾಹಕರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುವ ರೀತಿ ಮಳಿಗೆಯ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಇದೀಗ ಮಳಿಗೆಯು ಐದನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು ಮುಂದಿನ ದಿನಗಳಲ್ಲಿ ಮಳಿಗೆಗೆ ಹೆಚ್ಚೆಚ್ಚು ಗ್ರಾಹಕರು ಆಗಮಿಸಿ ಒಳ್ಳೆಯ ವ್ಯಾಪಾರ ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.
ಉಬಾರ್ ಕ್ಷೇತ್ರವು ಮೂರು ನದಿಗಳ ತ್ರಿವೇಣಿ ಸಂಗಮ ಕ್ಷೇತ್ರವಾಗಿದೆ- ಇಬ್ರಾಹಿಂ ಎನ್:
ಅಧ್ಯಕ್ಷತೆಯನ್ನು ವಹಿಸಿದ್ದ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಇಬ್ರಾಹಿಂ ಎನ್.ರವರು ಮಾತನಾಡಿ, ಉಪ್ಪಿನಂಗಡಿಗೆ ಐತಿಹಾಸಿಕ ಸ್ಥಾನಮಾನವಿದ್ದು ಇದೇ ಉಪ್ಪಿನಂಗಡಿಗೆ ಮತ್ತೊಂದು ಹೆಸರು ಉಬಾರ್. ಈ ಉಬಾರ್ ಎನ್ನುವುದು ವ್ಯಾಪಾರಕ್ಕೆ ಹೇಳಿದ ಊರಾಗಿದೆ. ಈ ಉಬಾರ್ ಕ್ಷೇತ್ರವು ಮೂರು ನದಿಗಳ ತ್ರಿವೇಣಿ ಸಂಗಮ ಕ್ಷೇತ್ರವಾಗಿದೆ. ಈ ಭಾಗದ ವ್ಯಾಪಾರಸ್ಥರಿಂದ ಉಬಾರ್ ಪರಿಸರವು ವ್ಯಾಪಾರ ಕೇಂದ್ರವಾಗಿ ಬೆಳೆದಿದೆ. ಇಲ್ಲಿನ ಸಿಟಿ ಸೆಂಟರ್‌ನಲ್ಲಿ ಉತ್ತಮ ಗುಣಮಟ್ಟದ ಉಡುಪುಗಳು, ಪಾದರಕ್ಷೆಗಳು ಹಾಗೂ ಇನ್ನಿತರ ವಸ್ತುಗಳು ಕೈಗೆಟಕುವ ದರದಲ್ಲಿ ದೊರಕುತ್ತದೆ ಎಂದು ಮಳಿಗೆಯ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದರು.
ಸಂಸ್ಥೆಯು ಉದ್ಯಮದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲೂ ಕೈಜೋಡಿಸುತ್ತಿದೆ-ಕೆ.ಅಬ್ದುಲ್ ರಹಿಮಾನ್:
ಉಪ್ಪಿನಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಅಬ್ದುಲ್ ರಹಿಮಾನ್ ಮಾತನಾಡಿ, ಕೊರೋನಾ ಸಮಯದಲ್ಲಿ ಉದ್ಘಾಟನೆಗೊಂಡ ಈ ಸಿಟಿ ಕಲೆಕ್ಷನ್ ಸೆಂಟರ್ ಸಂಸ್ಥೆಯು ಆತ್ಮವಿಶ್ವಾಸದಿಂದ ಮುನ್ನೆಡೆಯುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಉದ್ಯಮದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲೂ ಸಂಸ್ಥೆಯು ಕೈಜೋಡಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.
ಗ್ರಾಹಕರಿಗೋಸ್ಕರ ವಿನೂತನ ಯೋಜನೆಗಳನ್ನು ಮಳಿಗೆಯು ಹಾಕಿಕೊಳ್ಳುತ್ತಿದೆ-ಶಬ್ಬೀರ್ ಕೆಂಪಿ:
ಉಪ್ಪಿನಂಗಡಿ ವಾಣಿಜ್ಯ – ವರ್ತಕರ ಸಂಘದ ಉಪಾಧ್ಯಕ್ಷ ಶಬ್ಬೀರ್ ಕೆಂಪಿ ಮಾತನಾಡಿ, ಗ್ರಾಹಕರಿಗೋಸ್ಕರ ಯಾವುದಾದರೂ ವಿನೂತನ ಯೋಜನೆಯನ್ನು ಎಂ.ಜಿ ಬ್ರದರ್ಸ್‌ರವರು ಹಾಕಿಕೊಂಡು ಬರುತ್ತಿದ್ದಾರೆ. ಗುಣಮಟ್ಟದ ಸೇವೆಯೊಂದಿಗೆ ಕೈಗೆಟುಕು ದರದಲ್ಲಿ ವಸ್ತುಗಳು ಈ ಕೇಂದ್ರದಲ್ಲಿ ಲಭ್ಯವಾಗುತ್ತಿರುವುದು ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.
ಪಂಚಮಂ ಕಾರ್ಯಸಿದ್ಧಿ ಎಂಬುದು ಮಳಿಗೆಗೆ ಹೊಂದುತ್ತಿದೆ-ಪುಷ್ಪಲತಾ ಎಂ
ವಳಾಲು ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಶ್ರೀಮತಿ ಪುಷ್ಪಲತಾ ಎಂ ಮಾತನಾಡಿ, ಉಪ್ಪಿನಂಗಡಿ ಸಿಟಿ ಕಲೆಕ್ಷನ್ ಸೆಂಟರ್ ಇದೀಗ ಐದನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದರೂ ಇದರ ಅಭಿವೃದ್ಧಿಯ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದೆ. ಐದು ವರುಷ ಕಳೆದಾಗ ಪಂಚಮಂ ಕಾರ್ಯಸಿದ್ಧಿ ಎಂಬ ಉಲ್ಲೇಖವನ್ನು ಹಿರಿಯರು ಅನುಸರಿಸಿಕೊಂಡು ಬರುತ್ತಿದ್ದು, ಇದು ಈ ಮಳಿಗೆಗೆ ಪೂರಕವಾಗಿದೆ. ಮುಂದಿನ ದಿನಗಳಲ್ಲಿ ಜನಸಾಗರವೇ ಈ ಮಳಿಗೆಯ ಕಡೆಗೆ ಬರಲಿ ಎಂಬುದೇ ನಮ್ಮ ಹಾರೈಕೆಯಾಗಿದೆ ಎಂದರು.
ಗ್ರಾಹಕರು ನಮ್ಮವರೇ ಎಂಬಂತೆ ಸಿಬ್ಬಂದಿಗಳ ವರ್ತನೆ ಹಿಡಿಸಿದೆ-ಎಂ.ಕೆ ಮಠ:
ಚಲನಚಿತ್ರ ನಟ ಎಂ.ಕೆ ಮಠರವರು ಮಾತನಾಡಿ, ಈ ಸಂಸ್ಥೆಯ ಸೇಲ್ಸ್ ವಿಭಾಗದ ಪುರುಷರಾಗಲಿ, ಮಹಿಳೆಯರಾಗಲಿ ಮಳಿಗೆಗೆ ಆಗಮಿಸಿದ ಗ್ರಾಹಕರೊಂದಿಗೆ ಅವರು ನಮ್ಮವರೇ ಎಂಬಂತೆ ಪ್ರೀತಿಯಿಂದ ಮಾತನಾಡಿ ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಇದೀಗ ಸಂಸ್ಥೆಯು ಐದನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು ಗ್ರಾಹಕರು ಸಂಸ್ಥೆಯನ್ನು ಪ್ರೋತ್ಸಾಹಿಸಲಿ ಎಂದು ಹೇಳಿ ಶುಭ ಹಾರೈಸಿದರು.
ಪುತ್ತೂರು ಎಂ.ಜಿ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ ರಝಾಕ್ ಎಂ.ಜಿ, ಮಠ ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಸಿಟಿ ಕಲೆಕ್ಷನ್ ಸೆಂಟರ್ ಮುಖ್ಯಸ್ಥ ಹಮೀದ್ ಎಂ.ಜಿರವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಸುಜಾತಾ ಏಣಿತ್ತಡ್ಕರವರು ರೂ.500ರ ಖರೀದಿಗೆ ಪ್ರಥಮ ಕೂಪನ್ ಅನ್ನು ಪಡೆದುಕೊಂಡರು. ಸಿಟಿ ಸೆಂಟರ್ ಕಲೆಕ್ಷನ್ ಶಾಖೆಯ ಮ್ಯಾನೇಜರ್ ಸುಮತಿ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಖಲಂದರ್, ಮನ್ಸೂರ್ ಎಲೈಟ್, ಮಕ್ಸೂದ್, ಸಫ್ವಾನ್, ಶೈಲಜಾ, ಹುಸೈನ್, ಹೈದರ್, ಶಮೀರ್‌ರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಎಂ.ಜಿ ಬ್ರದರ್ಸ್‌ಗಳಾದ ಮಜೀದ್ ಎಂ.ಜಿ, ಜಬ್ಬಾರ್ ಎಂ.ಜಿ, ಸಿನಾನ್ ಎಂ.ಜಿ, ರಿಯಾಜ್ ಎಂ.ಜಿ, ರಹೀಮ್ ಎಂ.ಜಿರವರು ಉಪಸ್ಥಿತರಿದ್ದರು. ನಿವೃತ್ತ ಹಿರಿಯ ಶಿಕ್ಷಕ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕೂಪನ್ ದೊರೆಯುವ ಮಳಿಗೆಗಳು:
ಉಪ್ಪಿನಂಗಡಿಯಲ್ಲಿ ಹಳೆ ಬಸ್ಸು ನಿಲ್ದಾಣದ ಬಳಿಯ ಸಿಟಿ ಸೆಂಟರ್, ಪೃಥ್ವಿ ಕಾಂಪ್ಲೆಕ್ಸ್‌ನಲ್ಲಿನ ಹಾಗೂ ಬಿ.ಸಿ ರೋಡ್ ಕೈಕಂಬದ ಬಿಎಚ್‌ಬಿ ಸ್ಟೋರ್ ಎದುರುಗಡೆಯ ಕಮ್ಮಿದಂಗಡಿ ಕಮ್ಮಿರೇಟ್, ಪುತ್ತೂರಿನ ದರ್ಬೆ ಬುಶ್ರಾ ಕಾಂಪ್ಲೆಕ್ಸ್‌ನಲ್ಲಿನ ನಯಾ ಚಪ್ಪಲ್ ಬಜಾರ್, ದರ್ಬೆ ರೇಗೊ ಬಿಲ್ಡಿಂಗ್‌ನಲ್ಲಿನ ಕಮ್ಮಿದಂಗಡಿ ಕಮ್ಮಿರೇಟ್, ಮುಖ್ಯರಸ್ತೆಯ ನೇಮಿರಾಜ್ ಬಿಲ್ಡಿಂಗ್‌ನ ಸ್ಟೆಪ್ಸ್ ಫೂಟ್‌ವೇರ್, ಹಳೆ ಸಂಜೀವ ಶೆಟ್ಟಿ ಎದುರುಗಡೆಯ ಬ್ರೈಡಲ್ ಗಿಫ್ಟ್ ಆಂಡ್ ಪ್ಯಾನ್ಸಿ, ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಎದುರುಗಡೆಯ ನ್ಯೂ ಮೊಬೈಲ್ ಟ್ರ್ಯಾಕ್, ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಎದುರುಗಡೆಯ ಮದರ್ ಇಂಡಿಯಾ ಕಲೆಕ್ಷನ್, ಎಸ್‌ಎಲ್‌ವಿ ದೇವಸ್ಥಾನದ ಚೆಟ್ಟಿಯಾರ್ ಬಿಲ್ಡಿಂಗ್‌ನಲ್ಲಿನ ಕಮ್ಮಿದಂಗಡಿ ಕಮ್ಮಿರೇಟ್, ದರ್ಬೆ ರಾಜೇಶ್ ಪವರ್ ಪ್ರೆಸ್ ಎದುರುಗಡೆಯ ವೈಟ್ ಶೂ ಇಲ್ಲಿನ ಮಳಿಗೆಗಳಲ್ಲಿ ಗ್ರಾಹಕರಿಗೆ ಕೂಪನ್ ದೊರೆಯುತ್ತದೆ.
ನೋ ಪ್ರಾಫಿಟ್, ನೋ ಲಾಸ್..
ಕೊರೋನಾ ಸಂದರ್ಭದಲ್ಲಿ ನಮ್ಮ ಸಂಸ್ಥೆ ಉದ್ಘಾಟನೆಗೊಂಡಿತಾದರೂ ಆ ಸಂದರ್ಭದಲ್ಲಿ ಸಾಕಷ್ಟು ಕಷ್ಟ-ನಷ್ಟಗಳು ಎದುರಾದವು. ಪ್ರಸ್ತುತ ಸಂಸ್ಥೆಯು ಐದನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು ‘ನೋ ಪ್ರಾಫಿಟ್, ನೋ ಲಾಸ್’ ಎಂಬಂತೆ ಕಾರ್ಯಾಚರಿಸುತ್ತಿದೆ. ನಮ್ಮ ಮಳಿಗೆಯಲ್ಲಿ ಸುಮಾರು ಮೂವತ್ತು ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಸಂಸ್ಥೆಯ ಬೆಳವಣಿಗೆಗೆ ಸೇವೆ ನೀಡುತ್ತಿದ್ದಾರೆ. ಮಳಿಗೆಯ ವಾರ್ಷಿಕೋತ್ಸವದ ಪ್ರಯುಕ್ತ ನಮ್ಮ ಹನ್ನೊಂದು ಮಳಿಗೆಗಳಲ್ಲಿ ಪ್ರತಿ ರೂ.500ರ ಖರೀದಿಯ ಮೇಲೆ ಕೂಪನ್ ನೀಡುವ ವ್ಯವಸ್ಥೆಯನ್ನು ಹಮ್ಮಿಕೊಂಡಿದ್ದು, ಪ್ರತಿಯೋರ್ವರ ಮನಸ್ಸಿನಲ್ಲಿ ಸಿಟಿ ಸೆಂಟರ್ ಕಲೆಕ್ಷನ್ ಮಳಿಗೆಯು ಅಚ್ಚಳಿಯದೆ ಉಳಿಯಬೇಕು ಎನ್ನುವ ಕನಸು ನಮ್ಮದು.
-ರಫೀಕ್ ಎಂ.ಜಿ, ಪಾಲುದಾರರು, ಸಿಟಿ ಸೆಂಟರ್ ಕಲೆಕ್ಷನ್
ನಯಾ ಚಪ್ಪಲ್ ಬಜಾರ್‌ನಲ್ಲಿ ಡ್ರಾ..
ಉಪ್ಪಿನಂಗಡಿ ಸಿಟಿ ಸೆಂಟರ್ ಕಲೆಕ್ಷನ್‌ನ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಂಸ್ಥೆಯ ಮಾಲಕತ್ವದ ಹನ್ನೊಂದು ಮಳಿಗೆಗಳಲ್ಲಿ ಕೂಪನ್ ಡ್ರಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ದರ್ಬೆ ನಯಾ ಚಪ್ಪಲ್ ಬಜಾರ್‌ನಲ್ಲಿ ನಡೆದ ಡೈಲಿ ಡ್ರಾವನ್ನು ಐಸಿಐಸಿಐ ಬ್ಯಾಂಕ್ ಪ್ರಬಂಧಕ ಅರವಿಂದ್ ನಾಯಕ್ ರವರು ನಡೆಸಿಕೊಟ್ಟರು. ಈ ಡೈಲಿ ಡ್ರಾದಲ್ಲಿ ಸ್ವಾತಿ ರೈ ಹಾಗೂ ಉಪ್ಪಿನಂಗಡಿ ಸಿಟಿ ಸೆಂಟರ್ ಕಲೆಕ್ಷನ್ ನಲ್ಲಿ ಇಜ್ನಾ ಮರಿಯಮ್ ರವರು ವಿಜೇತರಾಗಿ ಗುರುತಿಸಿಕೊಂಡರು.
ರೂ.500ರ ಖರೀದಿಗೆ ಒಂದು ಕೂಪನ್..
ಪಾದಾರ್ಪಣೆ ಸಂಭ್ರಮದ ಪ್ರಯುಕ್ತ ಸಂಸ್ಥೆಯು ಸೂಚಿಸಿದ ಮಳಿಗೆಗಳಿಗೆ ಭೇಟಿ ನೀಡಿ, ಆ ಮಳಿಗೆಗಳಲ್ಲಿ ರೂ.500ರ ಮೇಲ್ಪಟ್ಟು ವಸ್ತುಗಳನ್ನು ಖರೀದಿ ಮಾಡುವ ಗ್ರಾಹಕರಿಗೆ ವಿಶೇಷ ಕೂಪನ್ ಲಭ್ಯವಾಗಲಿದೆ. ಮಳಿಗೆಯು ಗ್ರಾಹಕರಿಗೆ ರೆಫ್ರಿಜರೇಟರ್(ಪ್ರ), ವಾಷಿಂಗ್ ಮೆಷಿನ್(ದ್ವಿ), ಮಿಕ್ಸರ್ ಗ್ರೈಂಡರ್(ತೃ), ಮಿಕ್ಸಿ(ಚ), ಚೈನಾ ಪಾಟ್-3(ಪಂ) ಜೊತೆಗೆ 51 ಆಕರ್ಷಕ ಬಹುಮಾನಗಳನ್ನು ಘೋಷಿಸಿದೆ. ಅದರಲ್ಲಿ ಉಪ್ಪಿನಂಗಡಿ ಸಿಟಿ ಸೆಂಟರ್ ಕಲೆಕ್ಷನ್ ಹಾಗೂ ಪುತ್ತೂರಿನ ದರ್ಬೆ ನಯಾ ಚಪ್ಪಲ್ ಬಜಾರ್‌ನಲ್ಲಿ ಪ್ರತಿದಿನ ಕೂಪನ್ ಡ್ರಾ ಲಭ್ಯವಿದೆ. ವಿಜೇತರಿಗೆ ಫೆ.19 ರಂದು ಸಂಜೆ ಬಹುಮಾನಗಳನ್ನು ನೀಡಲಾಗುತ್ತದೆ.