ಪುತ್ತೂರು: ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆ ದಶ ಸಂಭ್ರಮ ಮತ್ತು ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆಯ ಪ್ರಯುಕ್ತ ಡಿ.10 ರಂದು ರಾತ್ರಿ ಗಂಟೆ 9.30ಕ್ಕೆ ಗಯಾಪದ ಕಲಾವಿದೆರ್ ಉಬಾರ್ ಇವರ ಅಭಿನಯದ “ನಾಗಮಾಣಿಕ್ಯ” ಚಾರಿತ್ರಿಕ ತುಳು ನಾಟಕ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ನಡೆಯಲಿದೆ.
ತುಳುನಾಡ ಕಲಾ ತಪಸ್ವಿ ರವಿಶಂಕರ ಶಾಸ್ತ್ರಿ ಮಣಿಲ ಇವರ ಕಲ್ಪನೆಯಲ್ಲಿ ಮೂಡಿಬಂದ ಚಾರಿತ್ರಿಕ ನಾಟಕವನ್ನು ರಚಿಸಿ ನಿರ್ದೇಶನವನ್ನು ಮಾಡಿ ಅಭಿನಯವನ್ನು ನೀಡಿದ್ದಾರೆ.
ಸಂಗೀತ ಮಾಂತ್ರಿಕ ಕಾರ್ತಿಕ್ ಶಾಸ್ತ್ರಿ ಮಣಿಲ ಇವರ ಸಂಗೀತದೊಂದಿಗೆ, ರಾಜೇಶ್ ಶಾಂತಿನಗರರವರ ಸಂಪೂರ್ಣ ಸಲಹೆ ಸಹಕಾರದೊಂದಿಗೆ, ರಂಗ ವಿನ್ಯಾಸದ ವಿಶೇಷ ಪರಿಕಲ್ಪನೆ, ಲಿತು ಸೌಂಡ್ಸ್ ಮತ್ತು ಇದರ ಕೃಷ್ಣ ಮುದ್ಯ ಮತ್ತು ಸಿದ್ದು ಬೆದ್ರ ಇವರ ಕೈ ಚಳಕ, ಪ್ರದೀಪ ಕಾವು, ನವ್ಯಾ ರಾಜ್ ಕಲ್ಲಡ್ಕ ಇವರ ಉತ್ತಮ ರೀತಿಯ ಮುಖವರ್ಣಿಕೆಯೊಂದಿಗೆ, ಗುಣಕರ ಅಗ್ನಾಡಿಯವರ ನಿರ್ವಹಣೆಯೊಂದಿಗೆ ಮೂಡಿಬರಲಿದೆ.
ಕಲಾವಿದರುಗಳಾಗಿ ಕಿಶೋರ್ ಜೋಗಿ ಉಬಾರ್, ದಿವಾಕರ ಸುರ್ಯ, ಸತೀಶ್ ಶೆಟ್ಟಿ ಹೆನ್ನಾಳ, ಬಿ ರಂಗಯ್ಯ ಬಲ್ಲಾಳ್ ಕೆದಂಬಾಡಿ ಬೀಡು, ರಾಜೇಶ್ ಶಾಂತಿನಗರ, ರಾಜಶೇಖರ ಶಾಂತಿನಗರ, ಅನುಷಾ ಪುರುಷರಕಟ್ಟೆ, ಸಂಧ್ಯಾಶ್ರೀ ಹಿರೇಬಂಡಾಡಿ, ಸುನಿಲ್ ಪೆರ್ನೆ, ಚೇತನ್ ಪಡೀಲ್, ಲಕ್ಷ್ಮಣ ಬೆಳ್ಳಿಪ್ಪಾಡಿ, ಉಷಾ ಲಕ್ಷ್ಮಣ ಬೆಳ್ಳಿಪ್ಪಾಡಿ, ಉದಯ್ ಆರ್ ಪುತ್ತೂರು, ಅನೀಶ್ ಉಬಾರ್, ಎ. ಯನ್ ಕೊಲಂಬೆ, ಭರತ್ ಕುಮಾರ್ ಶಾಂತಿನಗರ. ಮಾ| ಲಿತಿನ್ ಶಾಂತಿನಗರ, ಹರ್ಷ ಶಾಂತಿನಗರ, ಹೃತಿಕ ಬೆಳ್ಳಿಪಾಡಿ, ವಿಲಾಸಿನಿ ಶಾಂತಿನಗರ, ಪ್ರಣಿತ ಬಿ ಶಾಂತಿನಗರ ಇವರು ಅಭಿನಯಿಸುವರು. ನಾಟಕದ ತಾಂತ್ರಿಕ ವರ್ಗದಲ್ಲಿ ವಿಜಯ ಶಾಂತಿನಗರ, ನವೀನ್ ಶಾಂತಿನಗರ ಇವರುಗಳ ಕೈ ಚಳಕ ರಂಗ ವಿನ್ಯಾಸವನು ಕಲಾಭಿಮಾನಿಗಳ ಮನ ಮೆಚ್ಚುವಂತೆ ಮಾಡುವವರಿದ್ದಾರೆ. ನಾಟಕ ಬುಕ್ಕಿಂಗ್‌ಗೆ ದೂರವಾಣಿ ಸಂಖ್ಯೆ 9902543273, 9008136330 ಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.