ಪುತ್ತೂರು: ಸೌಂದರ್ಯವರ್ಧನಾ ಕ್ಷೇತ್ರದಲ್ಲಿ ಮುತ್ತಿನನಗರಿ ಪುತ್ತೂರಿಗೆ ಮತ್ತೊಂದು ಕೊಡುಗೆ ಎನ್ನುವಂತೆ, ಪಡ್ಡಾಯೂರಿನ ದಿವ್ಯಾ ಸಚಿನ್ ಶೆಟ್ಟಿ ಮಾಲಕತ್ವದ `ದಿವ್ಯಾ ಹರ್ಬಲ್ ಬ್ಯೂಟಿ ಪಾರ್ಲರ್’ ಶುಭಾರಂಭಗೊಂಡಿದೆ. ನಗರದ ಕೋರ್ಟ್ ರಸ್ತೆಯಲ್ಲಿರುವ ಗೋಲ್ಡನ್ ಪ್ಲಾಝಾದ ಪ್ರಥಮ ಮಹಡಿಯಲ್ಲಿ ಡಿ.7ರಂದು ಶುಭಾರಂಭಗೊಂಡ ದಿವ್ಯಾ ಹರ್ಬಲ್ ಬ್ಯೂಟಿ ಪಾರ್ಲರ್‌ನ್ನು ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಐಶ್ವರ್ಯಾ ಹರ್ಬಲ್ ಬ್ಯೂಟಿ ಪಾರ್ಲರ್‌ನ ಮಾಲಕಿ ಐಶ್ವರ್ಯಾ ಚಂದ್ರಶೇಖರ್ ದೀಪಪ್ರಜ್ವಲನೆಗೈದರು.
ಉದ್ಘಾಟನೆ ನೆರವೇರಿಸಿದ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಮಾತನಾಡಿ, ಮಹಿಳೆಯರ ಸೌಂದರ್ಯವನ್ನು ವರ್ದಿಸುವ ಕಾರ್ಯಕ್ಕೆ, ತನ್ನ ಕಾರ್ಯವನ್ನು ಸಮಾಜಕ್ಕೆ ಅರ್ಪಿಸಬೇಕೆಂದು ದಿವ್ಯಾ ಸಚಿನ್ ಅವರು ಪುತ್ತೂರಿನ ಹೃದಯಭಾಗದಲ್ಲಿ ಬ್ಯೂಟಿ ಪಾರ್ಲರ್‌ನ್ನು ಆರಂಭಿಸಿದ್ದಾರೆ. ಈ ಮೂಲಕ ಎಲ್ಲಾ ಮಹಿಳೆಯರ ಸೌಂದರ್ಯವನ್ನು ವೃದ್ಧಿಸುವ ಕೆಲಸವಾಗಲಿ. ಸಂಸ್ಥೆಯು ಪುತ್ತೂರಿನಲ್ಲೇ ಅತ್ಯದ್ಭುತ ಬ್ಯೂಟಿ ಪಾರ್ಲರ್ ಆಗಿ ಮೂಡಿಬರಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಮಾತನಾಡಿ, ಮಾಲಕಿ ದಿವ್ಯಾ ಸಚಿನ್ ಶೆಟ್ಟಿಯವರ ಅನೇಕ ದಶಕಗಳ ಕನಸು ಇಂದು ನನಸಾಗಿದೆ. 50-60 ವರ್ಷ ವಯಸ್ಸಿನವರನ್ನೂ 25 ವರ್ಷದವರಂತೆ ಕಾಣುವಂತೆ ಮಾಡುವ ಕೈಚಳಕ ಅವರಲ್ಲಿದೆ. ನಿಮ್ಮ ಕೈಚಳಕವನ್ನು ಸಾರ್ವಜನಿಕ ಮಹಿಳೆಯರು ಹೆಚ್ಚುಹೆಚ್ಚು ಬರುವಂತಾಗಲಿ ಎಂದು ಹಾರೈಸಿದರು.
ದೀಪಪ್ರಜ್ವಲನೆಗೈದ ಐಶ್ವರ್ಯಾ ಹರ್ಬಲ್ ಬ್ಯೂಟಿ ಪಾರ್ಲರ್‌ನ ಮಾಲಕಿ ಐಶ್ವರ್ಯಾ ಚಂದ್ರಶೇಖರ್ ಮಾತನಾಡಿ, ಮಕ್ಕಳಿಗೆ ತಾಯಿಯೇ ಮೊದಲ ಗುರು. ನಮ್ಮಲ್ಲಿ ಸುಮಾರು 3-4 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ತುಂಬಾ ಮೃದು ಸ್ವಭಾವದ, ಸೇವಾಮನೋಭಾವದ ಯವತಿ. ತಾಯಿಗೆ ಗುರುವಿನ ಸ್ಥಾನವನ್ನು ನೀಡುವಂತೆ ನನಗೆ ಸ್ಥಾನ ನೀಡಿದ್ದಾರೆ. ಮನಸ್ಸು ಒಳ್ಳೆಯದಿದ್ದರೆ ದೇವರು ಒಳ್ಳೆಯದು ಮಾಡುತ್ತಾರೆ. ಸಂಸ್ಥೆಯು ಉತ್ತಮವಾಗಿ ಹೆಸರು ಗಳಿಸಲಿ ಎಂದು ಶುಭಹಾರೈಸಿದರು.
ಸುದ್ದಿ ಸಮೂಹ ಸಂಸ್ಥೆಗಳ ನಿರ್ದೇಶಕಿ ಶೋಭಾ ಶಿವಾನಂದ ಅವರು ಮಾತನಾಡಿ, ಸೌಂದರ್ಯಪ್ರಜ್ಞೆ ಎನ್ನುವುದು ಇಂದು ಕೇವಲ ಮಹಿಳೆಯರಿಗೆ ಸೀಮಿತವಾಗಿಲ್ಲ. ಹಿಂದಿನಿಂದಲೂ ಮುಂದುವರೆದುಕೊಂಡು ಬಂದಿದೆ. ಸೌಂದರ್ಯ ನಮ್ಮ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಸದಾ ಕ್ರಿಯಾಶೀಲವಾಗಿದ್ದುಕೊಂಡು, ನಗುಮೊಗದ ಸೇವೆ ನೀಡುವ ದಿವ್ಯಾ ಸಚಿನ್ ಅವರ ನೂತನ ಪ್ರಯತ್ನ ಉಜ್ವಲವಾಗಿ ಬೆಳಗಲಿ ಎಂದು ಆಶಿಸಿದರು.
ಅತಿಥಿಗಳಾಗಿದ್ದ ಸವಣೂರು ಸರಕಾರಿ ಪ.ಪೂ. ಕಾಲೇಜಿನ ಸಂಗೀತ ಶಿಕ್ಷಕಿ ವಿದುಷಿ ಡಾ| ಪವಿತ್ರಾ ರೂಪೇಶ್ ಶೇಟ್ ಮಾತನಾಡಿ, ಮಹಿಳೆಯರಲ್ಲಿರುವ ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕೂ ಬ್ಯೂಟಿ ಪಾರ್ಲರ್‌ಗಳ ಅವಶ್ಯಕತೆ ಇರುತ್ತದೆ. ಸೌಂದರ್ಯವನ್ನು ಉಳಿಸಿ ಹೆಚ್ಚಿಸುವ ಕೆಲಸವನ್ನು ಮಾಡುತ್ತಿರುವ ದಿವ್ಯಾರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಸಮಾಜದಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದು ಕೂಡ ಸಮಾಜದಲ್ಲಿ ತುಂಬಾ ಮುಖ್ಯ. ಆಧುನಿಕ ಜಗತ್ತಿನಲ್ಲಿ ಸೌಂದರ್ಯವರ್ಧನೆಗೆ ಬೇಕಾದ ವ್ಯವಸ್ಥೆಗಳನ್ನು ಮನೆಯಲ್ಲಿ ಮಾಡಿಕೊಳ್ಳುವುದು ಕಷ್ಟ. ನೂತನ ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭಹಾರೈಸಿದರು.
ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸಂಜೀವ ಶೆಟ್ಟಿ ವಸಮಳಿಗೆಯ ಇಂದು ಶಿವಶಂಕರ್, ಮುಳಿಯ ಜ್ಯುವೆಲ್ಲರ್‍ಸ್‌ನ ನಿರ್ದೇಶಕರಾದ ಅಶ್ವಿನಿ ಕೃಷ್ಣ ಮುಳಿಯ, ಆಶೀರ್ವಾದ್ ಜ್ಯುವೆಲ್ಲರ್‍ಸ್‌ನ ಮಾಲಕ ಮಾಧವ ಶೇಟ್, ಪ್ರಕಾಶ್ ಜ್ಯುವೆಲ್ಲರ್‍ಸ್‌ನ ಉಮೇಶ್ ಆಚಾರ್, ಬಾವ ಜ್ಯುವೆಲ್ಲರ್‍ಸ್‌ನ ಅಬೂಬಕ್ಕರ್ ಸಿದ್ದೀಕ್, ಅಶ್ವಿನಿ ಬ್ಯೂಟಿ ಪಾರ್ಲರ್‌ನ ಮಾಲಕರಾದ ಅಶ್ವಿನಿ ಪವಿತ್ರಾ ಆಳ್ವ ಕೈಕಾರ, ಇನಿನಿಟಿ ಪಾರ್ಲರ್‌ನ ಮಾಲಕರಾದ ಶ್ರುತಿ ಕೋಟ್ಯಾನ್ ಮೊದಲಾದವರು ಭೇಟಿ ನೀಡಿ ಶುಭಹಾರೈಸಿದರು.
ಸಂಸ್ಥೆಯ ಮಾಲಕಿ ದಿವ್ಯಾ ಸಚಿನ್, ಪತಿ ಸಚಿನ್ ಶೆಟ್ಟಿ, ಸಚಿನ್ ಶೆಟ್ಟಿಯವರ ತಂದೆ ಸೋಮಶೇಖರ ಶೆಟ್ಟಿ, ತಾಯಿ ಮಂಗಳ ಮತ್ತು ಕುಟುಂಬಸ್ಥರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.
ಶುಭಾರಂಭ ಸಮಾರಂಭಕ್ಕೆ ಆಗಮಿಸಿ ಹಾರೈಸಿದ ಪ್ರತಿಯೋರ್ವರಿಗೂ ಹೃದಯಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ. ಈ ಹಿಂದೆ ನೆಹರೂನಗರದಲ್ಲಿ ಪಾರ್ಲರ್‌ನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಪೇಟೆಯ ಹೃದಯಭಾಗದಲ್ಲಿ ಪಾರ್ಲರ್ ಆರಂಭಿಸಬೇಕೆಂಬ ಕನಸಿತ್ತು. ಕನಸಿನ ಬಗ್ಗೆ ಪತಿಯ ಬಳಿ ಹೇಳಿಕೊಳ್ಳುತ್ತಿದ್ದೆ. ಪಾರ್ಲರ್ ಉದ್ಯಮಕ್ಕೆ ಬರಲು ಕುಟುಂಬಸ್ಥರು ಬಹಳಷ್ಟು ಪ್ರೋತ್ಸಾಹ ನೀಡಿದ್ದಾರೆ. ನನಗೆ ಕಲಿಸಿ, ಬೆಳೆಸಿದ ಐಶ್ವರ್ಯಾ ಮೇಡಂ, ಆತ್ಮೀಯ ಸ್ನೇಹಿತೆಯರು, ಗ್ರಾಹಕರು ಸಹಿತ ನಮ್ಮ ಪಯಣದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
-ದಿವ್ಯಾ ಸಚಿನ್ ಶೆಟ್ಟಿ, ಮಾಲಕರು
ಸಂಸ್ಥೆಯ ಮಾಲಕಿ ದಿವ್ಯಾ ಸಚಿನ್ ಶೆಟ್ಟಿಯವರು ದುಬೈನಲ್ಲಿಯೂ ಕೆಲಸ ನಿರ್ವಹಿಸಿದ್ದು, ಸೌಂದರ್ಯವರ್ಧಕ ಸೇವಾ ಕ್ಷೇತ್ರದಲ್ಲಿ ಬಹಳಷ್ಟು ವರ್ಷಗಳ ಅನುಭವ ಹೊಂದಿದ್ದಾರೆ. ನಗುಮೊಗದ ಸೇವೆ, ಗುಣಮಟ್ಟದ ಉತ್ಪನ್ನಗಳ ಬಳಕೆಯ ಮೂಲಕ ಗ್ರಾಹಕರ ಮನಸ್ಸು ಗೆದ್ದಿದ್ದಾರೆ. ದಿವ್ಯಾ ಹರ್ಬಲ್ ಬ್ಯೂಟಿ ಪಾರ್ಲರ್‌ನಲ್ಲಿ ಪ್ರೊ-ಷನಲ್ ಮೇಕಪ್, ಬ್ರೈಡಲ್ ಡ್ರೆಸಿಂಗ್, ಫೆಷಿಯಲ್, ಐಬ್ರೋಸ್, ಪೆಡಿಕ್ಯೂರ್, ಮೆನಿಕ್ಯೂರ್, ವ್ಯಾಕ್ಸಿಂಗ್, ಹೇರ್‌ಕಟ್ ಹೀಗೆ ಎಲ್ಲಾ ಸೌಂದರ್ಯವರ್ಧಕ ಸೇವೆಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿ ಮತ್ತು ಅಪಾಯಿಂಟ್‌ಮೆಂಟ್‌ಗಾಗಿ ಮೊ.ಸಂ.:7760277275ನ್ನು ಸಂಪರ್ಕಿಸಬಹುದಾಗಿದೆ.