ಉಪ್ಪಿನಂಗಡಿ: ಕೀಟನಾಶಕ ಸೇವಿಸಿದ್ದ ವ್ಯಕ್ತಿ ಮೃತ್ಯು

0

ಉಪ್ಪಿನಂಗಡಿ: ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ವಯೋವೃದ್ಧರೋರ್ವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಪಿಲಿಕೂಡೇಲು ಎಂಬಲ್ಲಿ ನಡೆದಿದೆ.


ವಯೋಸಹಜ ಕಾಯಿಲೆ ಮತ್ತು ಮರೆಗುಳಿತನದಿಂದ ಬಳಲುತ್ತಿದ್ದ ಪದ್ಮನಾಭ ಭಟ್ ಎಂಬವರು ಡಿ.4 ರಂದು ಮನೆಯಲ್ಲಿ ಮಗನಿಲ್ಲದ ವೇಳೆ ತೋಟಕ್ಕೆ ಸಿಂಪಡಿಸಿ ಉಳಿಕೆಯಾಗಿದ್ದ ಕ್ರಿಮಿನಾಶಕವನ್ನು ಔಷಧಿ ಎಂದು ತಿಳಿದು ಸೇವಿಸಿ ಅಸ್ವಸ್ಥತೆಗೆ ಒಳಗಾಗಿದ್ದರು. ಅವರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಆದಿತ್ಯವಾರದಂದು ನಿಧನರಾದರು ಎಂದು ಅವರ ಮಗ ಕೇಶವ ಪ್ರಸಾದ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here