ಚಿಕ್ಕಮುಡ್ನೂರು: ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಒಕ್ಕಲಿಗ ಸ್ವಸಹಾಯ ಸಂಘದಲ್ಲಿರುವ ಎಲ್ಲಾ ಗ್ರಾಮಗಳಲ್ಲಿ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಪ್ರಯುಕ್ತ ಚಿಕ್ಕಮೂಡ್ನೂರು ಗ್ರಾಮ ಒಕ್ಕೂಟದ ನಾಲ್ಕು ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಕೆಮ್ಮಾಯಿ ವಿಷ್ಣು ಮಂಟಪ ದಲ್ಲಿ ಡಿ.8ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಚಿಕ್ಕ ಮುಡ್ನೂರು ಇದರ ಅಧ್ಯಕ್ಷರಾದ ತಿಮ್ಮಪ್ಪ ಗೌಡ ಕೆಮ್ಮಾಯಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷರಾದ ಡಿವಿ ಮನೋಹರ್, ದಶಮಾನೋತ್ಸಹ ಸಮಿತಿ ಅಧ್ಯಕ್ಷರಾದ ಗೋಪಾಲಕೃಷ್ಣ ಗೌಡ ಪಟೇಲ್, ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಉಪ್ಪಿನಂಗಡಿ ಇದರ ವಲಯ ಅಧ್ಯಕ್ಷರಾದ ಗಂಗಯ್ಯ ಗೌಡ ಕನ್ನಡಾರು, ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ವಿಶ್ವನಾಥ ಗೌಡ ಕೆಯ್ಯೂರು,ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ವಾರಿಜಾ ಬೆಳ್ಯಪ್ಪ ಗೌಡ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಯುವ ಘಟಕದ ತಾಲೂಕು ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ಚಿಕ್ಕ ಮುಡ್ನೂರು ಗ್ರಾಮ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಬಡಾವು, ಬನ್ನೂರು ವಲಯ ಯುವ ಘಟಕದ ಅಧ್ಯಕ್ಷ ಮೋಹನ್ ಗೌಡ ಕಬಕ, ಗ್ರಾಮ ಮಹಿಳಾ ಅಧ್ಯಕ್ಷೆ ಕುಸುಮ, ದಶಮಾನೋತ್ಸವದ ಸಮಿತಿ ಪ್ರಧಾನ ಕಾರ್ಯದರ್ಶಿ ಹೂವಪ್ಪ ಗೌಡ ಪರ್ಪುಂಜ ಉಪಸ್ಥಿತರಿದ್ದರು.
ಒಕ್ಕೂಟದ ಪದಾಧಿಕಾರಿಗಳಾದ ಶ್ರೀನಿವಾಸ ಗೌಡ,ನಾಗಪ್ಪ ಗೌಡ,ಶ್ರೀದೇವಿ,ದೇವಕಿ,ಉಮಾವತಿ, ಪ್ರಕಾಶ್ಕೆಮ್ಮಾಯಿ, ಅರುಣಾ, ಚಂದ್ರಶೇಖರ, ಪ್ರಶಾಂತ್ ಕೆಮ್ಮಾಯಿ,ವಿಶ್ವನಾಥ ಗೌಡ ಕಟ್ಟೆ ಮಜಲು, ಚಂದ್ರಾವತಿ ಕೆಮ್ಮಾಯಿ, ಶೋಭಾ ಕೆಮ್ಮಾಯಿ ಅತಿಥಿಗಳನ್ನು ವೀಳ್ಯ ಕೊಟ್ಟು ಸ್ವಾಗತಿಸಿದರು.
ಕಾರ್ಯಕ್ರಮವನ್ನು ಮಹಿಳಾ ಘಟಕದ ಅಧ್ಯಕ್ಷರಾದ ಕುಸುಮ ಸ್ವಾಗತಿಸಿದರು, ಒಕ್ಕೂಟದ ಕೋಶಾಧಿಕಾರಿ ನಾಗಪ್ಪ ಗೌಡ ವಂದಿಸಿದರು.ಟ್ರಸ್ಟ್ ಮೇಲ್ವಿಚಾರಕಾರದ ಸುಮಲತಾ ಕಾರ್ಯಕ್ರಮ ನಿರ್ವಹಿಸಿದರು.
ನಿಧನ ಹೊಂದಿದ ಸೋಮಪ್ಪ ಗೌಡ ಬಡಾವು ಶ್ರದ್ಧಾಂಜಲಿ ಸಲ್ಲಿಕೆ
ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಹಾಗೂ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಪುತ್ತೂರು ಶಾಖೆಯ ಸಕಹಾ ಸಮಿತಿ ಸದಸ್ಯರಾಗಿದ್ದ ಚಿಕ್ಕ ಮುಡ್ನೂರು ಬಡಾವು ಸೋಮಪ್ಪ ಗೌಡ ಇವರಿಗೆ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಚಿಕ್ಕಮುಡ್ನೂರು ಗ್ರಾಮದ ನಾಲ್ಕು ಮಾದರಿ ದಂಪತಿಗಳಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ನಾಲ್ಕು ಮಾದರಿ ದಂಪತಿಗಳಾದ ಕಿಟ್ಟಪ್ಪ ಗೌಡ ಮತ್ತು ರಾಧ ಕೇಪುಳು, ಶಿವಪ್ಪ ಗೌಡ ಮತ್ತು ಕಮಲ ಬೀರಿಗ, ಬಾಬು ಗೌಡ ಮತ್ತು ತಿಮ್ಮಕ್ಕ ಕೆಮ್ಮಾಯಿ, ರುಕ್ಮಯ್ಯ ಗೌಡ ಮತ್ತು ಜಾನಕಿ ಕೆಳಗಿನಮನೆ ಇವರುಗಳನ್ನು ಶಾಲು ಹಾಕಿ, ಪೇಟ ತೋಡಿಸಿ ಸಾರಿ ನೀಡಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.