ಸುಳ್ಯಪದವು: ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದ ವಾರ್ಷಿಕ ನೇಮೋತ್ಸವದ ಪೂರ್ವಭಾವಿ ಸಭೆ

0

ಬಡಗನ್ನೂರುಃ ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಸ್ವಾಮಿ ಕೊರಗಜ್ಜ ಸೇವಾ ಸಮಿತಿ  ವತಿಯಿಂದ ಮಾ.9ರಂದು  ನಡೆಯುವ ವಾರ್ಷಿಕ ನೇಮೋತ್ಸವ ಪೂರ್ವಭಾವಿ ಸಭೆಯು ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ ರವರ ಅಧ್ಯಕ್ಷತೆಯಲ್ಲಿ ಡಿ.8ರಂದು ಶ್ರೀ ಕ್ಷೇತ್ರದ ಸಭಾಂಗಣದಲ್ಲಿ ನಡೆಯಿತು.

ಸೇವಾ ಸಮಿತಿ ಅಧ್ಯಕ್ಷ  ಬೆಳಿಯಪ್ಪ ಗೌಡ  ಶಬರಿನಗರ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿ, ಸ್ವಾಮಿ ಕೊರಗಜ್ಜ ಸೇವಾ ಸಮಿತಿ ವತಿಯಿಂದ ಸತತ 11 ವರ್ಷಗಳಲ್ಲಿ ಕ್ಷೇತ್ರದಲ್ಲಿ ನೇಮೋತ್ಸವ ಊರ ಭಕ್ತಾದಿಗಳ ಸಹಕಾರದಲ್ಲಿ ಉತ್ತಮ ರೀತಿಯಲ್ಲಿ ನಡೆದುಕೊಂಡು ಬಂದಿದ್ದು ಇದೀಗ 12 ವರ್ಷದ ನೇಮೋತ್ಸವ ಸಂಭ್ರಮದಲ್ಲಿದ್ದೇವೆ.ಈ ನೇಮೋತ್ಸವ ಉತ್ತಮ ರೀತಿಯಲ್ಲಿ ನಡೆಸುವಲ್ಲಿ ತಮ್ಮೆಲ್ಲರ ಸಹಕಾರ ಯಾಚಿಸಿದರು 

ಬಳಿಕ ನೇಮೋತ್ಸವ ಸಂದರ್ಭದಲ್ಲಿ ನಡೆಯುವ ಕಾರ್ಯಕ್ರಮಗಳ ರೂಪುರೇಷೆಗಳನ್ನು ತಯಾರಿಸಲಾಯಿತು.

ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ, ಕಾರ್ಯದರ್ಶಿ ಪ್ರಕಾಶ್ ಮರದಮೂಲೆ, ಉಪಾಧ್ಯಕ್ಷ ಸದಾನಂದ ಬೋಳಂಕೂಡ್ಲು, ಕೋಶಾಧಿಕಾರಿ ಭಾಸ್ಕರ ಹೆಗ್ಗಡೆ ಶಬರಿನಗರ, ಪ್ರಧಾನ ಪೂಜಾ ಕರ್ಮಿ ಮಾದವ ಸಾಲಿಯಾನ್  ಜತೆ ಕಾರ್ಯದರ್ಶಿ ವಿನಾಯ ಕಮಾರ್ ದೇವಸ್ಯ, ಹಾಗೂ ಸಮಿತಿ ಸದಸ್ಯರು ಮತ್ತು ಊರ ಭಕ್ತಾದಿಗಳು ಭಾಗವಹಿಸಿದ್ದರು.

ಸ್ವಾಮಿ ಕೊರಗಜ್ಜ ಸೇವಾ ಸಮಿತಿ ವತಿಯಿಂದ ಸತತ 11 ವರ್ಷಗಳಿಂದ ಕ್ಷೇತ್ರದಲ್ಲಿ ಸ್ವಾಮಿ ಕೊರಗಜ್ಜ ಹಾಗೂ ಗುಳಿಗ ದೈವದ  ನೇಮೋತ್ಸವ ಜತೆಗೆ  ಕ್ಷೇತ್ರದ ಅಭಿವೃದ್ಧಿ ಮತ್ತು  ವಿವಿಧ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಗಳ ಮೂಲಕ  ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಗಳ ಮೂಲಕ ಜನರ ಹೆಗ್ಗಳಿಕೆ ಪಾತ್ರರಾಗುವ ಮೂಲಕ 12 ನೇ ವರ್ಷದ ನೆಮೋತ್ಸವಕ್ಕೆ ಸಜ್ಜುಗೊಂಡಿದೆ.

LEAVE A REPLY

Please enter your comment!
Please enter your name here