ಆಲಂಕಾರು: ಡಿ.5ರಂದು ಹೃದಯಾಘಾತದಿಂದ ನಿಧನರಾದ ಆಲಂಕಾರು ಜೆಸಿಐ ಪೂರ್ವಾಧ್ಯಕ್ಷ, ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯ ಪ್ರಭಾರ ಮುಖ್ಯಶಿಕ್ಷಕ ದಿ. ಪ್ರದೀಪ್ ಬಾಕಿಲ ಅವರಿಗೆ ಜೇಸಿಐ ಆಲಂಕಾರು ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಡಿ.14ರಂದು ಸಂಜೆ 4 ಗಂಟೆಗೆ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ದೀನದಯಾಳ್ ಸಭಾಭವನದಲ್ಲಿ ನಡೆಯಲಿದೆ ಎಂದು ಜೆಸಿಐ ಪ್ರಕಟಣೆ ತಿಳಿಸಿದೆ.