ಸುದಾನ ಶಾಲಾ ವಾರ್ಷಿಕ ಕ್ರೀಡಾಕೂಟ

0

ಕಲಿಕೆಯೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಿದಾಗ ಭವಿಷ್ಯ ಉಜ್ವಲ-ಸ್ವೀಕೃತ್ ಆನಂದ್

ಪುತ್ತೂರು: ಯಾರು ಕ್ರೀಡೆಯಲ್ಲಿ ನಿರಂತರ ಭಾಗವಹಿಸುತ್ತಾರೋ ಅವರು ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಾಧ್ಯವಾಗುತ್ತದೆ. ನಮ್ಮ ಆರೋಗ್ಯಕರ ಬೆಳವಣಿಗೆಗೆ ಕ್ರೀಡೆ ಎಂಬುದು ಬಹಳ ಸಹಕಾರಿ. ಕಲಿಕೆಯ ಜೊತೆಗೆ ಕ್ರೀಡೆಯಲ್ಲೂ ತೊಡಗಿಸಿಕೊಳ್ಳಿ. ಕ್ರೀಡೆಯಲ್ಲಿ ಗೆಲುವಿಗಿಂತ ಭಾಗವಹಿಸುವಿಕೆ ಅತ್ಯಂತ ಪ್ರಮುಖವಾದುದು ಎಂದು ವಿಶ್ವ ಜೀವರಕ್ಷಕ ಚಾಂಪಿಯನ್‌ಶಿಪ್ 2024(ಸರ್ಫ್ ಬೋಟ್ ರೇಸ್) ಇದರ ಅಂತಾರಾಷ್ಟ್ರೀಯ ಪದಕ ವಿಜೇತ ಕ್ರೀಡಾಪಟು ಸ್ವೀಕೃತ್ ಆನಂದ್‌ ರವರು ಹೇಳಿದರು.

ಅವರು ಡಿ.10 ರಂದು ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯಲ್ಲಿ ನಡೆದ ವಾರ್ಷಿಕ ಕ್ರೀಡೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕ್ರೀಡಾ ಪುಷ್ಪವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆ ಎಂಬುದು ಶೈಕ್ಷಣೇತರ ಚಟುವಟಿಕೆ ಎಂದು ಭಾವಿಸಬಾರದು. ಕ್ರೀಡೆಯು ಒಂದರ್ಥದಲ್ಲಿ ಶಿಕ್ಷಣದ ಒಂದು ಭಾಗವಾಗಿದ್ದು, ಯಾರು ಕ್ರೀಡೆಯಲ್ಲಿ ಕಠಿಣ ಪರಿಶ್ರಮಪಟ್ಟು ನಿರಂತರ ಭಾಗವಹಿಸುತ್ತಾರೋ ಅವರು ಯಶಸ್ಸನ್ನು ಪಡೆಯಲು ಶಕ್ತರಾಗುತ್ತಾರೆ ಎಂದರು.

ಸನ್ಮಾನ:

ಈ ಸಂದರ್ಭದಲ್ಲಿ ವಿಶ್ವ ಜೀವರಕ್ಷಕ ಚಾಂಪಿಯನ್‌ಶಿಪ್ 2024(ಸರ್ಫ್ ಬೋಟ್ ರೇಸ್) ಇದರ ಅಂತಾರಾಷ್ಟ್ರೀಯ ಪದಕ ವಿಜೇತ ಕ್ರೀಡಾಪಟು ಸ್ವೀಕೃತ್ ಆನಂದ್‌ರವರ ಸಾಧನೆಯನ್ನು ಗುರುತಿಸಿ ಅವರನ್ನು ಶಾಲಾ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನಿತರ ಸನ್ಮಾನ ಪತ್ರವನ್ನು ಶಾಲೆಯ ಸಂಚಾಲಕ ರೆ|ವಿಜಯ ಹಾರ್ವಿನ್ ಓದಿದರು.

ಮೌನ ಪ್ರಾರ್ಥನೆ:

ಡಿ.10 ರಂದು ಅಗಲಿದ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ, ಕೇಂದ್ರ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ ಕೃಷ್ಣರವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಭಗವಂತನಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯು ಏರ್ಪಡಿಸಿದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಶಿಕ್ಷಕಿ ರೀಟಾರವರು ಕ್ರೀಡಾ ವಿಜೇತರ ಪಟ್ಟಿ ವಾಚಿಸಿದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪುಷ್ಪರಾಜ್ ಸ್ವಾಗತಿಸಿ, ಕ್ರೀಡಾ ಮಂತ್ರಿ ಅನಿಕಾ ಯು ವಂದಿಸಿ, ಕ್ರೀಡಾಪಟುಗಳಿಗೆ ಪ್ರಮಾಣವಚನವನ್ನು ಬೋಧಿಸಿದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಕೋಶಾಧಿಕಾರಿ ಆಸ್ಕರ್ ಆನಂದ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮನೋಹರ್ ಕೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಆಡಳಿತ ಮಂಡಳಿ ಸದಸ್ಯ ಸುಶಾಂತ್ ಹಾರ್ವಿನ್, ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ಮಾಮಚ್ಚನ್ ಎಂ, ಶಾಲಾ ಮುಖ್ಯಶಿಕ್ಷಕಿ ಶೋಭಾ ನಾಗಾರಾಜ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಗ್ಲ್ಯಾಡೀಸ್ ಶರೋನ್, ಶಾರದಾ ಪಿ.ಕಾರ್ಯಕ್ರಮ ನಿರೂಪಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ನವೀನ್, ಲೀಲಾವತಿ, ಶಾಲಾ ಶಿಕ್ಷಕ ವೃಂದ, ಆಡಳಿತ ಸಿಬ್ಬಂದಿ ವರ್ಗ ಸಹಕರಿಸಿದರು.

ಕ್ರೀಡಾಜ್ಯೋತಿ ಪಥಸಂಚಲನ

ದೀಪ್ತಿ, ಸ್ಫೂರ್ತಿ, ಕೀರ್ತಿ ಹಾಗೂ ಜ್ಯೋತಿ ವಿದ್ಯಾರ್ಥಿಗಳನ್ನೊಳಗೊಂಡ ನಾಲ್ಕು ತಂಡಗಳು ಶಾಲೆಯ ಕ್ರೀಡಾಂಗಣದಲ್ಲಿ ಶಾಲಾ ಬ್ಯಾಂಡ್ ವಾದ್ಯದೊಂದಿಗೆ ಆಕರ್ಷಕ ಪಥಸಂಚಲನವನ್ನು ನಡೆಸಿಕೊಟ್ಟರು. ರಾಜ್ಯ ಮಟ್ಟದ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಾದ ನಿಹಾರಿಕಾ, ಆದಿತ್ಯ ಕಟ್ಕರ್, ದಿಶಾನ್ ಕೆ.ಎಸ್, ಮಹಮದ್ ಅರ್ಹಾನ್, ಆದಿ ಲಯನ್, ಮನೀಷ್ ಯು.ಶೆಟ್ಟಿ, ವಿಘ್ನೇಶ್ ಸಿ.ರೈ, ಇಬ್ರಾಹಿಂ ಫಾಝಿಲ್, ಆಯುಷ್ ಎಲ್.ರೈ, ಮಾನ್ವಿ ಡಿ, ನಿಕೋಲಸ್ ಮಥಾಯಸ್‌ ರವರು ಕ್ರೀಡಾಜ್ಯೋತಿಯೊಂದಿಗೆ ಕ್ರೀಡಾಂಗಣಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕುತ್ತಾ ಬಳಿಕ ಕ್ರೀಡಾಜ್ಯೋತಿಯನ್ನು ಕ್ರೀಡಾ ಮಂತ್ರಿ ಅನಿಕಾ ಯು. ರವರು ಮುಖ್ಯ ಅತಿಥಿ ಸ್ವೀಕೃತ್ ಆನಂದ್‌ ರವರಿಗೆ ಹಸ್ತಾಂತರಿಸಿದರು. ಬಳಿಕ ಸ್ವೀಕೃತ್ ಆನಂದ್‌ರವರು ಕ್ರೀಡಾಜ್ಯೋತಿಯನ್ನು ಮೇಲಕ್ಕೆತ್ತಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ಕ್ರೀಡಾಜ್ಯೋತಿಯನ್ನು ಕ್ರೀಡಾಂಗಣದ ಮತ್ತೊಂದು ಬದಿಯಲ್ಲಿರಿಸಿದ ಪೀಠದಲ್ಲಿ ಉರಿಸಿಡಲಾಯಿತು.

ಪ್ರಶಸ್ತಿ

ಮೊದಲು ನಡೆದ ಆಕರ್ಷಕ ಪಥಸಂಚಲನದಲ್ಲಿ ಸ್ಫೂರ್ತಿ ತಂಡದ ವಿಘ್ನೇಶ್ ಸಿ.ರೈ ರವರು ಬೆಸ್ಟ್ ಕಮಾಂಡ್ ಆಗಿ ಮತ್ತು ಬೆಸ್ಟ್ ಮಾರ್ಚರ್ ಆಗಿ ನಾಲ್ಕು ತಂಡದ ಅನುಕ್ರಮವಾಗಿ ಸ್ಫೂರ್ತಿ ತಂಡದ ಅಧ್ವಿಜ್ ಸಜೇಶ್ ಹಾಗೂ ಸಾನ್ವಿ ಜೆ.ಶೆಟ್ಟಿ, ಕೀರ್ತಿ ತಂಡದ ರಾಹುಲ್ ಪಿ.ಶೆಟ್ಟಿ ಹಾಗೂ ಯಶ್ವಿ, ದೀಪ್ತಿ ತಂಡದ ಶನನ್ ಹಾಗೂ ಧನ್ವಿಕಾ, ಜ್ಯೋತಿ ತಂಡದ ಮೆನಾಫ್ ಮೊಹಮ್ಮದ್ ಹಾಗೂ ಸೃಷ್ಟಿ ಎನ್.ವಿ ರವರು ಪ್ರಶಸ್ತಿಯನ್ನು ಪಡೆದುಕೊಂಡರು.

LEAVE A REPLY

Please enter your comment!
Please enter your name here