ಕಾಣಿಯೂರು: ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರಯುಕ್ತ ಇಲಾಖಾ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಡಿ. 5ರಂದು ಶ್ರೀರಾಮ ಪ್ರೌಢಶಾಲೆ ಪರಂಗಿಪೇಟೆ ಇಲ್ಲಿ ನಡೆದ ಜಿಲ್ಲಾಮಟ್ಟದ ಇಂಗ್ಲಿಷ್ ಪ್ರಬಂಧದಲ್ಲಿ ಪ್ರಗತಿ ವಿದ್ಯಾ ಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿನಿ ಹನ್ಸಿಕಾ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರು ಕಡಬ ತಾಲೂಕು ಬೆಳಂದೂರು ಗ್ರಾಮದ ಬನಾರಿ ಸುರಭಿ ನಿಲಯದ ವಾಸಪ್ಪ ಶೆಟ್ಟಿಗಾರ ಮತ್ತು ವೈಶಾಲಿ ದಂಪತಿಗಳ ಪುತ್ರಿ.
ಇವರನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಗನ್ನಾಥ ರೈ ನುಳಿಯಾಲು, ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿವೀಶ್ ಮುರುಳ್ಯ, ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ, ಮುಖ್ಯ ಗುರುಗಳು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದರು. ಇವರಿಗೆ ಆಂಗ್ಲ ಮಾಧ್ಯಮದ ಮುಖ್ಯಗುರು ನಾರಾಯಣ ಭಟ್ ಮಾರ್ಗದರ್ಶನ ನೀಡಿರುತ್ತಾರೆ. ದೈಹಿಕ ಶಿಕ್ಷಣ ಶಿಕ್ಷಕಿ ವನಿತಾ ಕೆ ಎಸ್ ಸಹಕರಿಸಿದರು.