ಶಾಲಾ ಅಭಿವೃದ್ಧಿಯಲ್ಲಿ ಪುಂಡಲೀಕ ಪೂಜಾರರವರ ಪಾತ್ರ ಅನನ್ಯ – ಗಿರಿಶಂಕರ ಸುಲಾಯ
ಕಾಣಿಯೂರು: ವಿದ್ಯಾರ್ಥಿಗಳು, ಪೋಷಕರು, ಊರಿನ ಸಂಘ ಸಂಸ್ಥೆಗಳು ನಡೆಸುವ ಸನ್ಮಾನವೇ ಪುಂಡಲೀಕ ಪೂಜಾರ ಅವರ ವ್ಯಕ್ತಿತ್ವಕ್ಕೆ ಸಾಕ್ಷಿ. ದೂರದ ಬಾದಾಮಿಯಿಂದ ಆಗಮಿಸಿ ಹನ್ನೆರಡು ವರ್ಷಗಳ ಕಾಲ ಸೇವೆ ಸಲ್ಲಿಸಿ ತಮ್ಮ ವೃತ್ತಿ ಜೀವನದಲ್ಲಿ ಶಾಲೆಯ ಅಭಿವೃದ್ಧಿಗೆ ತನ್ನನ್ನು ತಾನು ತೊಡಗಿಸಿಕೊಳ್ಳುವ ಇಂತಹ ಮುಖ್ಯಗುರುಗಳಿದ್ದರೆ ಸರಕಾರಿ ಶಾಲೆಗಳು ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ ಎಂದು ಸವಣೂರು ಕಾಣಿಯೂರು ರೈತ ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರಾದ ಗಿರಿಶಂಕರ ಸುಲಾಯರವರು ಹೇಳಿದರು.
ಅವರು ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಮುಖ್ಯ ಗುರುಗಳಾದ ಪುಂಡಲೀಕಪ್ಪ ಪೂಜಾರ್ ರವರಿಗೆ ಶಾಲಾ ಎಸ್.ಡಿ.ಎಂ.ಸಿ ಮತ್ತು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಪುಂಡಲೀಕರವರ ಅವಧಿಯಲ್ಲಿ ಶಾಲೆಯ ಅಭಿವೃದ್ಧಿಯನ್ನು ಕಂಡಿದೆ ಇಂತಹ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ಸಿಗಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯಗುರುಗಳಾದ ಪುಂಡಲೀಕಪ್ಪ ಪೂಜಾರ್ ರವರು ತನ್ನ ವೃತ್ತಿ ಜೀವನದಲ್ಲಿ ಸಹಕರಿಸಿದ ಎಲ್ಲ ಎಸ್.ಡಿ.ಎಂ.ಸಿ ಅಧ್ಯಕ್ಷರುಗಳನ್ನು ಅವರ ಸಹಕಾರವನ್ನು ನೆನಪಿಸಿಕೊಂಡರು. ಮುಖ್ಯಗುರುಗಳಾಗಿ ಕರ್ತವ್ಯ ನಿರ್ವಹಿಸಿ ಯಶಸ್ವಿಯಾಗಲು ಸಹಕರಿಸಿದ ಎಲ್ಲ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿಗಳು ಉತ್ತಮವಾಗಿ ವಿದ್ಯಾಭ್ಯಾಸವನ್ನು ಪೂರೈಸುವುದರೊಂದಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಥಮಿಕ ಶಾಲಾ ಮುಖ್ಯಗುರುಗಳ ಸಂಘದ ಜಿಲ್ಲಾ ಅಧ್ಯಕ್ಷರಾದ ನಿಂಗರಾಜು ಕೆ.ಪಿ ಮಾತನಾಡಿ, ಕಾಣಿಯೂರು ಶಾಲೆಯ ಇಂದಿನ ವಾತಾವರಣ ಗಮನಿಸಿದರೆ ಮುಂದೆ ಕೆ.ಪಿ.ಎಸ್ ಅಥವಾ ಪಿ.ಎಂ.ಶ್ರೀ ಶಾಲೆಯಾಗುವ ಅವಕಾಶ ಇದೆ. ಇದಕ್ಕೆ ಪುಂಡಲೀಕ ಪೂಜಾರ್ ರವರ ಕಾರ್ಯಗಳು ಸಹಕಾರಿಯಾಗಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪರಮೇಶ್ವರ ಗೌಡ ಅನಿಲ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾಣಿಯೂರು ಕ್ಲಸ್ಟರ್ ಸಿ ಆರ್ ಪಿ ಯಶೋದ, ವೇದಾ ಪೂಜಾರ್, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ಚಿದಾನಂದ ಉಪಾಧ್ಯಾಯ ಕಲ್ಪಡ, ಕಾಣಿಯೂರು ಶ್ರೀ ಮಠದ ವ್ಯವಸ್ಥಾಪಕರಾದ ಶ್ರೀನಿಧಿ ಅಚಾರ್, ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ವಸಂತ ಪೆರ್ಲೋಡಿ, ಲಲಿತಾ ದರ್ಖಾಸು, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪದ್ಮಯ್ಯ ಗೌಡ ಅನಿಲ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಉತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಬರೆಪ್ಪಾಡಿ, ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ ಅಬೀರ, ಸದಸ್ಯೆ ಗೌರಿ ಮಾದೋಡಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಯಶೋದಾ ನೇರೋಳ್ತಡ್ಕ ಉಪಸ್ಥಿತರಿದ್ದರು. ಚೆನ್ನಪ್ಪ ಗೌಡ ಕಲ್ಪಡ, ದಿನೇಶ್ ಅನ್ಯಾಡಿ, ಕೇಶವ ಮರಕ್ಕಡ, ಧರ್ಮೆಂದ್ರ ಗೌಡ ಕಟ್ಟತ್ತಾರು, ಉಮೇಶ್ ಮುಗರಂಜ, ಬಾಲಕೃಷ್ಣ ಕರಂದ್ಲಾಜೆ, ಸೀತಾರಾಮ ಮಿತ್ತಮೂಲೆ, ಯಶಕಲಾ ಮುಗರಂಜ, ಅಮಿತಾ ಅನಿಲ, ಆಶಾ ಕಟ್ಟತ್ತಾರು, ರೋಹಿಣಿ ಅಬೀರ, ಹನೀಫ್ ಕೂಡುರಸ್ತೆ, ಹಿರಿಯ ಶಿಕ್ಷಕಿ ದೇವಕಿ, ಪರಮೇಶ್ವರ ಅನಿಲ , ಚಂದ್ರಶೇಖರ್ ಬೈತಡ್ಕ ಅವರು ಅತಿಥಿಗಳನ್ನು ಗೌರವಿಸಿದರು. ಮುಖ್ಯಗುರು ಬಾಲಕೃಷ್ಣ.ಕೆ ಸ್ವಾಗತಿಸಿ, ಅತಿಥಿ ಶಿಕ್ಷಕಿ ದಿವ್ಯಾ ವಂದಿಸಿದರು. ಸಹ ಶಿಕ್ಷಕಿ ವೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನ
ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 12 ವರ್ಷಗಳ ಕಾಲ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಪುಂಡಲಿಕ ಪೂಜಾರ್ ಅವರನ್ನು ಕಾಣಿಯೂರಿನ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು. ಕಾಣಿಯೂರು ಸ.ಹಿ.ಪ್ರಾ.ಶಾಲಾ ಎಸ್ ಡಿ ಎಂ ಸಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ, ಕಾಣಿಯೂರು ವಿಶ್ವಜ್ಞ ಯುವಕ ಮಂಡಲ, ಗೆಳೆಯರ ಬಳಗ ಕೊಡಿಮಾರು ಅಬೀರ, ಕಾಣಿಯೂರು ಕಣ್ವರ್ಷಿ ಮಹಿಳಾ ಮಂಡಳಿ, ಒಡಿಯೂರು ಸ್ವಸಹಾಯ ಸಂಘಗಳ ಕಾಣಿಯೂರು ಘಟಕ ಸಮಿತಿ, ಕಾಣಿಯೂರು, ಅಯ್ಯಪ್ಪ ಸ್ವಾಮೀ ಸೇವಾ ಸಮಿತಿ ಅತಿಥಿ ಶಿಕ್ಷಕರು, ಕಾಣಿಯೂರು ಅಂಕಲ್ ಸ್ವೀಟ್ಸ್, 7ನೇ ತರಗತಿ ವಿದ್ಯಾರ್ಥಿಗಳು ಹಾಗೂ ಚಂದ್ರಶೇಖರ್ ಬರೆಪ್ಪಾಡಿ, ಸುಚಿತ್ರಾ ಕಟ್ಟತ್ತಾರು, ಭಾರತಿ ಕಟ್ಟತ್ತಾರು, ಅಮಿತಾ ಅನಿಲ, ಜಯಲಕ್ಷ್ಮಿ ಮಾದೇರಿ ಅವರು ವೈಯುಕ್ತಿಕವಾಗಿ ಸನ್ಮಾನಿಸಿದರು.