ಬಡಗನ್ನೂರು:ದ. ಕ. ಜಿಲ್ಲಾ ಪಂಚಾಯತ್ ಮಂಗಳೂರು ಪಶುಸಂಗೋಪನೆ ಮತ್ತು ಪಶು ಚಿಕಿತ್ಸಾಲಯ ಕೊಳ್ತಿಗೆ ಹಾಗೂ ಪಶು ಚಿಕಿತ್ಸಾ ಸೇವಾ ಕೇಂದ್ರ ಈಶ್ವರಮಂಗಲ ಮತ್ತು ಗ್ರಾಮ ಪಂಚಾಯತ್ ಬಡಗನ್ನೂರು ಇವರ ಸಂಯುಕ್ತ ಆಶ್ರಯದಲ್ಲಿ ನಾಯಿಗಳಿಗೆ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಶಿಬಿರವು ದ.12 ರಂದು ಗ್ರಾ.ಪಂ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ,ಗ್ರಾಮಸ್ಥರು ತಮ್ಮ ಸಾಕು ನಾಯಿಗಳನ್ನು ತಂದು ಲಸಿಕೆ ಹಾಕಿಸಿಕೊಳ್ಳುವಂತೆ ಹೇಳಿದರು.
ಪುತ್ತೂರು ಪಶುಸಂಗೋಪನೆ ಇಲಾಖಾ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ ಧರ್ಮಪಾಲ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಇದೊಂದು ಮಾನ್ಯತೀತ ಕಾಯಿಲೆ ಇದಕ್ಕೆ ಲಸಿಕೆ ಒಂದೇ ಮದ್ದು. 2030ರ ಹೊತ್ತಿಗೆ ಹುಚ್ಚು ನಾಯಿ ರೋಗವನ್ನು ದೇಶದಲ್ಲಿ ಸಂಪೂರ್ಣ ನಿರ್ಮೂಲನೆ ಮಾಡುವ ಉದ್ದೇಶದಿಂದ ತಾಲೂಕಿನ ಎಲ್ಲಾ ಕಡೆಗಳಲ್ಲಿ ಲಸಿಕೆ ಅಭಿಯಾನ ನಡೆಸಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು. ಕೊಳ್ತಿಗೆ ಪಶು ಚಿಕಿತ್ಸಾಲಯದ ಹಿರಿಯ ಪಶುವೈದ್ಯಾಧಿಕಾರಿ ಡಾ.ಎಂ.ಪಿ ಪ್ರಕಾಶ್ ಪ್ರಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ಸಂತೋಷ್ ಅಳ್ವ ಗಿರಿಮನೆ ವೆಂಕಟೇಶ್ ಕನ್ನಡ್ಕ, ಕುಮಾರ ಅಂಬಟೆಮೂಲೆ, ಕೌಡಿಚ್ಚಾರ್ ಹಿರಿಯ ಪಶುವೈದ್ಯ ಪರಿವೀಕ್ಷಕ ವೀರಪ್ಪ ಪಶುವೈದ್ಯ ಸಹಾಯಕ ಪುಂಡರೀಕಾಕ್ಷ ಪುತ್ತೂರು ಕುಮಾರ್ ಎನ್.ಜಿ ಪೆರ್ಲಂಪ್ಪಾಡಿ, ಗ್ರಂಥ ಪಾಲಕಿ ಪ್ರೀಯಾ, ಹಾಗೂ ಗ್ರಾಮಸ್ಥರು ಭಾಗವಹಿಸಿದರು.
ಈಶ್ವರಮಂಗಲ ಹಿರಿಯ ಪಶುವೈದ್ಯ ಪರಿವೀಕ್ಷಕ ಬಸವರಾಜ್ ಈಳೆಗೇರ್ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
4 ತಂಡಗಳ ಮೂಲಕ ಗ್ರಾ.ಪಂ ವ್ಯಾಪ್ತಿಯ 20 ಕೇಂದ್ರಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನಡೆದಿದ್ದು ಸುಮಾರು 580 ನಾಯಿಗಳಗೆ ಲಸಿಕೆ ಹಾಕಲಾಯಿತು. ಸಿಬ್ಬಂದಿಗಳಾದ ಸರೋಜ ಕುಲಾಲ್, ಭರತ್ ಪ್ರದೀಪ್ ಹಾಗೂ ಪಶುಸಕಿ ರತ್ನಾವತಿ ಸಹಕರಿಸಿದರು.