ಅರಿಯಡ್ಕ: ಕೌಡಿಚ್ಚಾರು -ಅರಿಯಡ್ಕ ಶ್ರೀ ಕೃಷ್ಣ ಭಜನಾ ಮಂದಿರ ಇದರ ನೇತೃತ್ವದಲ್ಲಿ ಜ.7 ರಂದು ನಡೆಯುವ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಯುಕ್ತ 43 ನೇ ವರ್ಷದ ಅರ್ಧ ಏಕಾಹ ಭಜನಾ ಮಂಗಳೋತ್ಸವ ಹಾಗೂ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಮೇಳದವರ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಡಿ.7 ರಂದು ಜ್ಯೋತಿಷಿ ಸುಬ್ರಾಯ ಬಲ್ಯಾಯ ಮದ್ಲ ಬಿಡುಗಡೆ ಮಾಡಿದರು.
ಆ ಬಳಿಕ ಮಾತನಾಡಿ, ಯಕ್ಷಗಾನ ಬಯಲಾಟ ಮಾಡುತ್ತಿರುವುದು ಸಂತಸ ತಂದಿದೆ.ಇಂದಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡುವ ಅನಿವಾರ್ಯತೆ ಇದೆ.ಧಾರ್ಮಿಕ ಕಾರ್ಯ ಕ್ರಮಗಳು ಇನ್ನೂ ಹೆಚ್ಚು ಈ ಕ್ಷೇತ್ರದಲ್ಲಿ ನಡೆಯಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಮಂದಿರದ ಅಧ್ಯಕ್ಷ ರಾಮದಾಸ್ ರೈ ಮದ್ಲ, ಗೌರವಾಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ, ಉಪಾಧ್ಯಕ್ಷರಾದ ಸದಾಶಿವ ಮಣಿಯಾಣಿ ಕುತ್ಯಾಡಿ , ಕುಶಾಲಪ್ಪ ಗೌಡ ಮಡ್ಯಂಗಳ,ಮತ್ತು ವಿಶ್ವನಾಥ ರೈ ಕುತ್ಯಾಡಿ, ಭಜನಾ ಸಂಕೀರ್ತನಾ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ ಕುತ್ಯಾಡಿ,ಗೌರವ ಸಲಹೆಗಾರರಾದ ಡಿ.ಅಮ್ಮಣ್ಣ ರೈ ಪಾಪೆ ಮಜಲು, ಕುಂಞ ರಾಮ ಮಣಿಯಾಣಿ ಕುತ್ಯಾಡಿ, ಸಂತೋಷ್ ಮಣಿಯಾಣಿ ಕುತ್ಯಾಡಿ, ಹರೀಶ್ ರೈ ಜಾರತ್ತಾರು, ಕೋಶಾಧಿಕಾರಿ ತಿಲಕ್ ರೈ ಕುತ್ಯಾಡಿ,ಕಾರ್ಯ ದರ್ಶಿ ಕೊರಗಪ್ಪ ಗೌಡ ಮಡ್ಯಂಗಳ, ಪ್ರಧಾನ ಅರ್ಚಕ ಕರುಣಾಕರ ಗೌಡ,ಮಹಿಳಾ ಭಜನಾ ಸಮಿತಿ ಗೌರವಾಧ್ಯಕ್ಷೆ ಭಾರತಿ ವಸಂತ್ ಕೌಡಿಚ್ಚಾರು, ಪ್ರಧಾನ ಕಾರ್ಯದರ್ಶಿ ಹೇಮಲತಾ ಬಳ್ಳಿಕಾನ, ಕಾರ್ಯದರ್ಶಿ ಯಕ್ಷಿತಾ ಮರತ್ತ ಮೂಲೆ, ಉಪಾಧ್ಯಕ್ಷೆ ವೇದಾವತಿ,ಹಾಗೂ ಮಂದಿರದ ಸದಸ್ಯರು, ಭಜನಾ ಸಂಕೀರ್ತನಾ ಸಮಿತಿ ಪದಾಧಿಕಾರಿಗಳು, ಮಹಿಳಾ ಭಜನಾ ಸಮಿತಿಯ ಪದಾಧಿಕಾರಿಗಳು,ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿ ಸದಸ್ಯರು,ಭಕ್ತಾದಿಗಳು, ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ದೀಪಕ್ ಕುಲಾಲ್ ಸ್ವಾಗತಿಸಿ, ವಂದಿಸಿದರು.