ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮ:ಸರ್ವೆ ಗ್ರಾಮದ ಮಾದರಿ ದಂಪತಿಗಳಿಗೆ ಸನ್ಮಾನ

0

ಸರ್ವೆ:ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪುತ್ತೂರು ದಶಮಾನೋತ್ಸವ ಸಮಿತಿ ಮತ್ತು ಅಲುಂಬುಡ ಸೇವಾ ಪ್ರತಿಷ್ಠಾನ (ರಿ) ಬನ್ನೂರು ಪುತ್ತೂರು ಇದರ ಸಹಯೋಗದೊಂದಿಗೆ, ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಸರ್ವೆ, ಮಹಿಳಾ ಘಟಕ, ಗ್ರಾಮ ಸಮಿತಿಯ ಸಹಕಾರದೊಂದಿಗೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಸ್ವಸಹಾಯ ಸಂಘಗಳಿರುವ ಎಲ್ಲಾ ಗ್ರಾಮಗಳಲ್ಲಿ ದಾಂಪತ್ಯ ಜೀವನದ 50 ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸರ್ವೆ ಗ್ರಾಮದ ತಂಬುತ್ತಡ್ಕ ಈಶ್ವರ ಗೌಡರ ಮನೆಯಲ್ಲಿ ಮೂರು ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವು ಡಿ.11 ರಂದು ನಡೆಯಿತು.

ಮುಖ್ಯ ಅತಿಥಿ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಮಾದರಿ ದಂಪತಿಗಳನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಒಕ್ಕಲಿಗ ಸ್ವಸಹಾಯ ಟ್ರಸ್ಟಿನ ಮೂಲಕ ಸಂಘಗಳನ್ನು ರಚಿಸಿ ಸಾಲ ಸೌಲಭ್ಯ, ಅನುದಾನಗಳನ್ನು ನೀಡುತ್ತಿರುವುದು ಹೆಗ್ಗಳಿಕೆಯಾಗಿದೆ ಎಂದರು.

ಟ್ರಸ್ಟಿನ ಸ್ಥಾಪಕಾಧ್ಯಕ್ಷ ಎ.ವಿ. ನಾರಾಯಣರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಒಕ್ಕಲಿಗ ಸ್ವಸಹಾಯ ಟ್ರಸ್ಟಿನ ಸವಣೂರು ವಲಯದ ನಿರ್ದೇಶಕ ವಸಂತ ವೀರಮಂಗಲ, ಅಲುಂಬುಡ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣಗೌಡ, ಉಪಾಧ್ಯಕ್ಷ ಪದ್ಮಪ್ಪ ಗೌಡ, ಯುವ ಘಟಕದ ಅಧ್ಯಕ್ಷ ಪದ್ಮನಾಭ ಸರ್ವೆ, ಮಾಗಣೆ ಗೌಡರಾದ ರಮೇಶ್ ಗೌಡ ಕೀನ್ಯಾ ಕಾಯರ್ ಮುಗೇರು, ಜಯರಾಮ ಸರ್ವೆ ಉಪಸ್ಥಿತರಿದ್ದರು.

ಸರ್ವೆ ಒಕ್ಕೂಟದ ಅಧ್ಯಕ್ಷೆ ಜಯಶೀಲರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ದಾಂಪತ್ಯ ಜೀವನದ 50 ವರ್ಷ ಪೂರೈಸಿದ ದಂಪತಿಗಳಾದ ಹೊನ್ನಪ್ಪ ಗೌಡ ಮತ್ತು ಪುಷ್ಪಾವತಿ ಎಲಿಯ, ಈಶ್ವರ ಗೌಡ ಮತ್ತು ಕಾವೇರಿ ತಂಬುತ್ತಡ್ಕ, ಬಾಳಪ್ಪ ಗೌಡ ಮತ್ತು ಅನಸೂಯಾ ಬಾಕುಡ ಇವರುಗಳನ್ನು ಸನ್ಮಾನಿಸಲಾಯಿತು. ವಿಶೇಷವಾಗಿ ರೇಷ್ಮಾ ಕಾರ್ತಿಕ್ ರವರ ಸೀಮಂತ ಕಾರ್ಯಕ್ರಮವು ನಡೆಯಿತು. ಅರುಣೋದಯ ಸಂಘದ ಸದಸ್ಯರು ಪ್ರಾರ್ಥನೆಗೈದರು. ನಳಿನಾಕ್ಷಿ ಭಗವದ್ಗೀತೆ ವಾಚಿಸಿದರು. ಯೋಗೀಶ್ ಸರ್ವೇ ಸ್ವಾಗತಿಸಿದರು. ಪ್ರೇರಕರಾದ ಹೇಮಲತಾ ಸ್ವಾಗತಿಸಿ, ಪರಿಚಯ ಪತ್ರ ವಾಚಿಸಿದರು. ಸಂಘದ ಸದಸ್ಯರಾದ ಕವಿತಾ ವಂದಿಸಿದರು. ಮೇಲ್ವಿಚಾರಕ ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here