ಬೈಪಾಸ್ ಬಪ್ಪಳಿಗೆ ನೂಜಿಯಲ್ಲಿ ಮತ್ತೆ ತಲೆ ಎತ್ತಿದ ಟವರ್ ನಿರ್ಮಾಣ ಕಾರ್ಯ..!

0

ಪುತ್ತೂರು: ಬೈಪಾಸ್ ರಸ್ತೆ ಖಾಸಗಿ ಸ್ಥಳದಲ್ಲಿ ಮೊಬೈಲ್ ಟವರ್ ನಿರ್ಮಾಣ ಕಾರ್ಯ ಸ್ಥಳೀಯರ ವಿರೋಧದ ನಡುವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರೂ ಇದೀಗ ಮತ್ತೆ ಟವರ್ ನಿರ್ಮಾಣದ ಕೆಲಸ ಕಾರ್ಯ ಆರಂಭಗೊಂಡಿದೆ.


ಡಿ.12ರಂದು ಟವರ್ ನಿರ್ಮಾಣ ಕಾರ್ಯ ಆರಂಭಗೊಂಡ ಬೆನ್ನಲ್ಲೆ ಮತ್ತೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.

ಈ ಕುರಿತು ಪುತ್ತೂರು ಬೈಪಾಸ್ ರಸ್ತೆಯ ಬಪ್ಪಳಿಗೆಯ ಗುಡ್ಡದ ಮೇಲಿನ ಖಾಸಗಿ ಸ್ಥಳವೊಂದರಲ್ಲಿ ಖಾಸಗಿ ಕಂಪೆನಿಯೊಂದರಿಂದ ಮೊಬೈಲ್ ಟವರ್ ಕಾಮಗಾರಿ ನಡೆಯುತ್ತಿರುವುದನ್ನು ಸ್ಥಳೀಯರು ವಿರೋಧಿಸಿದ್ದಲ್ಲದೆ ನಗರಸಭೆಯಿಂದ ನಿರಾಪೇಕ್ಷಣ ಪತ್ರ ಪಡೆಯದೇ ಟವರ್ ನಿರ್ಮಾಣ ಮಾಡುತ್ತಿದ್ದಾರೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಜನವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡಬಾರದು. ಜೊತೆಗೆ ಮಳೆಗಾದಲ್ಲಿ ಪದೇ ಪದೇ ಕುಸಿಯುತ್ತಿರುವ ಬೈಪಾಸ್ ರಸ್ತೆಯ ಗುಡ್ಡದಲ್ಲಿ ಈ ಟವರ್ ನಿರ್ಮಾಣ ಆದರೆ ಅಪಾಯ ತಪ್ಪಿದಲ್ಲ ಎಂದು ಆರೋಪಿಸಿ ಟವರ್ ವಿರೋಧಿಸಿ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ ಘಟನೆ ಡಿ.10ರಂದು ನಡೆದಿತ್ತು.ಅದಾದ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಟವರ್ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಕಾರ್ಮಿಕರಿಗೆ ಸೂಚನೆ ನೀಡಿದ್ದರು.


ಬೈಪಾಸ್ ರಸ್ತೆಯ ಬಪ್ಪಳಿಗೆಯ ಅನಂತ ಕಾಮತ್ ಮತ್ತು ರಾಧಾಕೃಷ್ಣ ಕಾಮತ್ ಎಂಬವರ ಎತ್ತರದ ಸ್ಥಳದಲ್ಲಿರುವ ಖಾಸಗಿ ಸ್ಥಳದಲ್ಲಿ ಬೆಂಗಳೂರಿನ ಇಂಡಸ್ ಟವರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ಮೊಬೈಲ್ ಟವರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಜನವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡಬಾರದು ಎಂಬ ಸೂಚನೆ ಇದ್ದರೂ ಮೊಬೈಲ್ ಟವರ್ ಕಾಮಗಾರಿ ನಡೆಯುತ್ತಿದೆ ಎಂದು ಈ ಹಿಂದೆಯೇ ನಗರಸಭೆ ಸ್ಥಳೀಯರು ದೂರು ನೀಡಿದ್ದರು.

ಸ್ಥಳೀಯರ ಆಕ್ಷೇಪಣೆಯ ಹಿನ್ನಲೆಯಲ್ಲಿ ಮೊಬೈಲ್ ಟವರ್ ನಿರ್ಮಾಣ ಕಾರ್ಯ ಮುಂದುವರಿಸದಂತೆ ನಗರಸಭೆಯಿಂದ ಸೆ.5ಕ್ಕೆ ಮೊಬೈಲ್ ಟವರ್ ಸಂಸ್ಥೆಗೆ ನೋಟೀಸ್ ನೀಡಲಾಗಿತ್ತು.

LEAVE A REPLY

Please enter your comment!
Please enter your name here