ಬಡಗನ್ನೂರು: ಲಯನ್ಸ್ ಕ್ಲಬ್ ಪುತ್ತೂರು ಹಾಗೂ ಪಟ್ಟೆ ವಿದ್ಯಾ ಸಂಸ್ಥೆಗಳ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಆರೋಗ್ಯ ಮಾಹಿತಿ ಕಾರ್ಯಕ್ರಮ ಪಟ್ಟೆ ವಿದ್ಯಾ ಸಂಸ್ಥೆಗಳಲ್ಲಿ ದ.9ರಂದು ನಡೆಯಿತು.
ಪುತ್ತೂರು ಸರಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ತಾರನಾಥ ರೈ ನೀರಾಳರವರು ಹೆಚ್ ಐ ವಿ HIV ಏಡ್ಸ್ ಹಾಗೂ ಹದಿಹರಯದ ಮಕ್ಕಳ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಅರೋಗ್ಯ ಸಹಾಯಕಿ ನಂದಿನಿ ರಕ್ತಹೀನತೆ ಮತ್ತು ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮವು ಪುತ್ತೂರು ಲಯನ್ಸ್ ಕಬ್ಬಿನ ಅಧ್ಯಕ್ಷರಾದ ಪ್ರೇಮಲತಾ ರಾವ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಲಯನ್ಸ್ ಕ್ಲಬ್ ನ ಜಿಲ್ಲಾಧ್ಯಕ್ಷರಾದ ವತ್ಸಲ ರಾಜ್ಞೆ, ಶಿಕ್ಷಣ ಕ್ಷೇತ್ರದ ಕಾರ್ಯದರ್ಶಿಯಾದ ನಯನ ರೈ, ಕುಂಬ್ರ ಕ್ಲಸ್ಟರ್ ನ ಸಿಆರ್ ಪಿ, ಶಶಿಕಲಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯರಾದ ರಂಗನಾಥ್ ರಾವ್, ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ರಾಜಗೋಪಾಲ್ ಭಟ್ ಉಪಸ್ಥಿತರಿದ್ದರು.
ಪ್ರತಿಭಾ ಪ್ರೌಢಶಾಲಾ ಮುಖ್ಯಗುರುಗಳಾದ ಸುಮನ ಸ್ವಾಗತಿಸಿ, ಸಹ ಶಿಕ್ಷಕಿ ಭವಿತ ವಂದಿಸಿದರು. ಶಿಕ್ಷಕ ವಿಶ್ವನಾಥ್ ಗೌಡ ಬೊಳ್ಳಾಡಿ ರವರು ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಮೋನಪ್ಪ, ಜಯಶ್ರೀ, ಪ್ರೀತಿ ಕುಮಾರಿ, ಶೈಲಶ್ರೀ ರವರು ಸಹಕರಿಸಿದರು.