ರೋಯಲ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಎ.ಕೆ ಜಯರಾಮ ರೈ,ಉಪಾಧ್ಯಕ್ಷರಾಗಿ ಜಗಜೀವನ್‌ದಾಸ್ ರೈ ಎ. ಅವಿರೋಧ ಆಯ್ಕೆ

0

ಪುತ್ತೂರು: ಪುತ್ತೂರು ರೋಯಲ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಎ.ಕೆ ಜಯರಾಮ ರೈ ಹಾಗೂ ಉಪಾಧ್ಯಕ್ಷರಾಗಿ ಜಗಜೀವನ್‌ದಾಸ್ ರೈ ಎ ರವರು ಅವಿರೋಧವಾಗಿ ಆಯ್ಕೆಯಾದರು. ಡಿ.13ರಂದು ಕಛೇರಿಯ ಸಭಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾ ರಿಟರ್ನಿಂಗ್ ಅಧಿಕಾರಿ ಹಾಗೂ ಮಂಗಳೂರು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕರ ಕಛೇರಿಯ ಪ್ರಥಮ ದರ್ಜೆ ಸಹಾಯಕ ನವೀನ್ ಕುಮಾರ್ ಎಂ.ಎಸ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ಅಭಿನಂದನಾ ಸಭೆ:
ಆಯ್ಕೆ ಪ್ರಕ್ರಿಯೆ ಬಳಿಕ ರೋಯಲ್ ಸೌಹಾರ್ದ ಸಹಕಾರಿಯ ಸ್ಥಾಪಕ ಅಧ್ಯಕ್ಷ ಸಹಕಾರ ರತ್ನ ದಂಬೆಕಾನ ಸದಾಶಿವ ರೈರವರ ನೇತೃತ್ವದಲ್ಲಿ ಅಭಿನಂದನಾ ಸಭೆ ನಡೆಯಿತು. ಸಲಹಾ ಸಮಿತಿಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಶಾಲು ಹಾಕಿ ಅಭಿನಂದಿಸಿ ಪ್ರಾಸ್ತಾವಿಕ ಮಾತನಾಡಿದರು. 2024-29ನೇ ಸಾಲಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇದರ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಚುನಾವಣಾ ರಿಟರ್ನಿಂಗ್ ಅಧಿಕಾರಿ ನವೀನ್ ಕುಮಾರ್ ಎಂ.ಎಸ್.ರವರನ್ನು ಸಹಕಾರಿ ಸಂಘದ ನೂತನ ಅಧ್ಯಕ್ಷ ಎ.ಕೆ ಜಯರಾಮ ರೈಯವರು ಶಾಲು ಹಾಕಿ ಅಭಿನಂದನೆ ಸಲ್ಲಿಸಿದರು.

ಸಹಕಾರಿ ಸಂಘದ ನಿರ್ದೇಶಕ ಡಾ|| ರಾಜೇಶ್ ಬೆಜ್ಜಂಗಳ ಅಭಿನಂದನಾ ಭಾಷಣ ಮಾಡಿದರು. ನಿರ್ದೇಶಕ ಆನಂದ ರೈ ಪಿ. ಸ್ವಾಗತಿಸಿ, ವಿಶ್ವನಾಥ ನಾಯ್ಕ ಕೆ. ವಂದಿಸಿದರು. ಸಹಕಾರಿ ಸಂಘದ ನಿರ್ದೇಶಕ ಶ್ರೀನಿವಾಸ ಎಂ.ಸಿ., ಅಕ್ಷಯ್ ರೈ ದಂಬೆಕಾನ, ಆನಂದ ಎಂ. ಬೆಂಗಳೂರು, ದೇವಪ್ಪ ಗೌಡ ಎಂ., ಪ್ರಭಾಕರ ರೈ ಕೆ., ಸುರೇಖಾ ಬಿ. ರೈ, ಬಾಬು ಗೌಡ, ಸಂದೀಪ್ ರೈ ಸಿ., ಯಶೋಧರ ಜೈನ್, ಕಿಟ್ಟಣ್ಣ ರೈ ಎನ್., ಗುಲಾಬಿ ಎನ್. ಶೆಟ್ಟಿ ಹಾಗೂ ಸಲಹಾ ಸಮಿತಿಯ ಸದಸ್ಯ ಭಗವಾನ್ ದಾಸ್ ರೈ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಯಶವಂತ ಕುಮಾರ್, ಗುಮಾಸ್ತ ರಕ್ಷಿತ್ ಯು. ಸಹಕರಿಸಿದರು.

LEAVE A REPLY

Please enter your comment!
Please enter your name here